ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದ 18 ನೇ ಪುನ: ಪ್ರತಿಷ್ಠಾ ಮಹೋತ್ಸವ ಅರವತ್ ಶ್ರೀ ಕೆ ಯು ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ಮೇ 19ರಂದು ನಡೆಯಲಿದೆ. ಬೆಳಿಗ್ಗೆ 7.30ಕ್ಕೆ ಗಣಹೋಮ, 8ಗಂಟೆಗೆ ಶ್ರೀಚರಣ್ ಕೋಟೆಕಣಿ ಅವರ ಸೇವಾರ್ಥ ಚಂಡಿಕಾ ಹೋಮ, ಬಿಂಬಶುದ್ದಿ, ಕಳಶಪೂಜೆ, ಸಾನ್ನಿದ್ಯಕಲಶ ಪೂಜೆ, ಕಲಷಾಬಿಷೇಕ ನಡೆಯಲಿದೆ.
ಮಧ್ಯಾಹ್ನ 1ಗಂಟೆಗೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ, ಸಾಮೂಹಿಕ ಲಲಿತಾಸಹಸ್ರ ನಾಮ ಪಠಣ ನಡೆಯಲಿದೆ. ರಾತ್ರಿ 8ಕ್ಕೆ ಭಜನೆ, 9ಕ್ಕೆ ಮಹಾಪೂಜೆ ಪ್ರಸಾದವಿತರಣೆ ನಡೆಯಲಿರುವುದಾಗಿ ದೇವಸ್ಥಾನ ಸಮಿತಿ ಅಧ್ಯಕ್ಷ ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.