ಸಿಂಗಪುರ: ಸಿಂಗಪುರದಲ್ಲಿ ಈಗ ಕೋವಿಡ್-19ರ ಹೊಸ ಅಲೆ ಕಾಣಿಸಿದ್ದು, ಮೇ 5ರಿಂದ 11ರವರೆಗೆ 25,900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜನರು ಮತ್ತೆ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಶನಿವಾರ ಸಲಹೆ ನೀಡಿದರು.
ಸಿಂಗಪುರ: ಸಿಂಗಪುರದಲ್ಲಿ ಈಗ ಕೋವಿಡ್-19ರ ಹೊಸ ಅಲೆ ಕಾಣಿಸಿದ್ದು, ಮೇ 5ರಿಂದ 11ರವರೆಗೆ 25,900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜನರು ಮತ್ತೆ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಶನಿವಾರ ಸಲಹೆ ನೀಡಿದರು.
'ನಾವು ಕೋವಿಡ್ ಹೊಸ ಅಲೆಯ ಆರಂಭಿಕ ಭಾಗದಲ್ಲಿದ್ದೇವೆ.
ತೀವ್ರ ನಿಗಾಘಟಕಕ್ಕೆ (ಐಸಿಯು) ದಿನಂಪ್ರತಿ ಮೂರು ಪ್ರಕರಣಗಳು ದಾಖಲಾಗುತ್ತಿದ್ದು, ಇದರ ಹಿಂದಿನ ವಾರದಲ್ಲಿ ದಿನಕ್ಕೆ ಸರಾಸರಿ ಇಬ್ಬರು ಕೋವಿಡ್ ಬಾಧಿತರು ಐಸಿಯುಗೆ ದಾಖಲಾಗುತ್ತಿದ್ದರು ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಜಾಗತಿಕವಾಗಿ, ಪ್ರಧಾನವಾಗಿ ಕೋವಿಡ್ 19 ರೂಪಾಂತರಿ ಜೆಎನ್.1 ಮತ್ತು ಅದರ ಉಪ ತಳಿಗಳಾದ ಕೆಪಿ.1 ಮತ್ತು ಕೆಪಿ.2 ಕಾಣಿಸಿಕೊಳ್ಳುತ್ತಿವೆ. ಸಿಂಗಪುರದಲ್ಲಿ ವರದಿಯಾಗುತ್ತಿರುವ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಪ್ರಕರಣಗಳು ಕೆಪಿ.1 ಮತ್ತು ಕೆಪಿ.2 ಉಪ ತಳಿಯ ಪ್ರಕರಣಗಳಾಗಿವೆ. ಇವು ಹೆಚ್ಚು ರೂಪಾಂತರಗೊಂಡು ಹರಡುವ ಅಥವಾ ಹೆಚ್ಚು ತೀವ್ರವಾದ ರೋಗವನ್ನು ಉಂಟುಮಾಡುವ ಯಾವುದೇ ಸೂಚನೆಗಳಿಲ್ಲ ಎಂದೂ ಅದು ತಿಳಿಸಿದೆ.