HEALTH TIPS

ಮೊದಲ 2 ಹಂತದ ಚುನಾವಣೆ: ಕ್ರಮವಾಗಿ ಶೇ 66.14, ಶೇ 66.71 ಮತದಾನ

         ವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಕ್ರಮವಾಗಿ ಶೇ 66.14 ಮತ್ತು ಶೇ 66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ.

           ಮೊದಲಹಂತದ ಮತದಾನ ಪ್ರಕ್ರಿಯೆಯು ಪೂರ್ಣಗೊಂಡ 11 ದಿನಗಳ ನಂತರ, ಅಂತಿಮ ಶೇಕಡಾವಾರು ವಿವರ ಪ್ರಕಟಿಸಿರುವ ಆಯೋಗದ ನಡೆಯನ್ನು ವಿರೋಧಪಕ್ಷಗಳು ಪ್ರಶ್ನಿಸಿವೆ.

ಮತದಾನದ ಅಂತಿಮ ಪ್ರಮಾಣ ಹಂಚಿಕೊಡಿರುವ ಆಯೋಗವು, ಮೊದಲ ಹಂತದಲ್ಲಿ ಶೇ 66.22ರಷ್ಟು ಪುರುಷರು, 66.07ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಹಕ್ಕು ಚಲಾಯಿಸಿರುವ ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣ ಶೇ 31.22ರಷ್ಟು ಎಂದು ತಿಳಿಸಿದೆ.

              ಏ.26ರಂದು ನಡೆದಿದ್ದ ಎರಡನೇ ಹಂತದ ಮತದಾನದಲ್ಲಿ ಶೇ 66.99ರಷ್ಟು ಪುರುಷರು, ಶೇ 66.42ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣಶೇ 23.86ರಷ್ಟು ಎಂದು ವಿವರಿಸಿದೆ.

          ವಿರೋಧಪಕ್ಷಗಳ ಪ್ರಶ್ನೆ: ವಿಳಂಬವಾಗಿ ಮತದಾನದ ಪ್ರಮಾಣವನ್ನು ಪ್ರಕಟಿಸಿರುವ ಆಯೋಗದ ನಡೆಯನ್ನು ಕಾಂಗ್ರೆಸ್‌, ಸಿಪಿಎಂ, ಟಿಎಂಸಿ ಪ್ರಶ್ನಿಸಿದೆ.

            ಸಕಾಲದಲ್ಲಿ ಹಾಗೂ ಪಾರದರ್ಶಕವಾದ ಕ್ರಮದಲ್ಲಿ ಅಂಕಿ ಅಂಶ ಪ್ರಕಟಿಸುವುದು ಅಗತ್ಯ. ಇದೇ ಮೊದಲ ಬಾರಿಗೆ 11 ದಿನ ತಡವಾಗಿ ವಿವರ ಪ್ರಕಟಿಸಲಾಗಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಆಕ್ಷೇಪಿಸಿದ್ದಾರೆ.

              ತೃಣಮೂಲ ಕಾಂಗ್ರೆಸ್‌ ನಾಯಕ ಡೆರೆಕ್ ಒಬ್ರಯಾನ್ ಅವರು, 'ತಮ್ಮದೇ ಅಂಪೈರ್‌ ಅನ್ನು ನೇಮಿಸಿಕೊಳ್ಳಲು ಹಾಗೂ ಆಯೋಗವನ್ನು ನಾಶಪಡಿಸಲು ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿಯೇ ಕಾಯ್ದೆಯನ್ನೇ ಬದಲಿಸಿಕೊಂಡರು' ಎಂದು ಟೀಕಿಸಿದ್ದಾರೆ.

             'ಪ್ರತಿ ಹಂತದ ಮತದಾನ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಸುದ್ದಿಗೋಷ್ಠಿಯನ್ನು ನಡೆಸಿ ವಿವರಗಳನ್ನು ಪ್ರಕಟಿಸುವ ಕ್ರಮವನ್ನು ಏಕೆ ಪಾಲಿಸುತ್ತಿಲ್ಲ' ಎಂದೂ ಪ್ರಶ್ನಿಸಿದ್ದಾರೆ.

                    ಸಿಪಿಎಂ ‌ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, 'ಇದು ಬೇಸರ ಮೂಡಿಸುವ ಬೆಳವಣಿಗೆ, ಚುನಾವಣೆ ಫಲಿತಾಂಶಗಳನ್ನು ತಿರುಚಲಾಗುತ್ತಿದೆ ಎಂಬ ಬಗ್ಗೆ ಗಂಭೀರವಾದ ಅನುಮಾನಗಳನ್ನು ಇದು ಹುಟ್ಟಿಹಾಕಲಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries