ಅಗರ್ತಲಾ: ತ್ರಿಪುರಾ ಸರ್ಕಾರ ಬುಧವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ನಿರ್ಬಂಧ ಹೇರಿದೆ. ಸರಕು ಸಾಗಣೆ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿ ಈಶಾನ್ಯ ರಾಜ್ಯದಲ್ಲಿ ಇಂಧನ ದಾಸ್ತಾನು ಕಡಿಮೆಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಅಗರ್ತಲಾ: ತ್ರಿಪುರಾ ಸರ್ಕಾರ ಬುಧವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ನಿರ್ಬಂಧ ಹೇರಿದೆ. ಸರಕು ಸಾಗಣೆ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿ ಈಶಾನ್ಯ ರಾಜ್ಯದಲ್ಲಿ ಇಂಧನ ದಾಸ್ತಾನು ಕಡಿಮೆಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಅಸ್ಸಾಂನ ಜಟಿಂಗಾದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ತ್ರಿಪುರಾಗೆ ಸರಕು ರೈಲುಗಳ ಸಂಚಾರಕ್ಕೆ ಪರಿಣಾಮ ಬೀರಿದೆ.
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ದಿನಕ್ಕೆ 200 ರೂ., ನಾಲ್ಕು ಚಕ್ರದ ವಾಹನಗಳಿಗೆ ದಿನಕ್ಕೆ 500 ರೂ.ನಂತೆ ಪೆಟ್ರೋಲ್ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.
ಪೆಟ್ರೋಲ್ ಪಂಪ್ ಗಳಿಗೆ ದಿನಕ್ಕೆ ಒಂದು ಬಸ್‌ಗೆ ಕೇವಲ 60 ಲೀಟರ್ ಡೀಸೆಲ್ ಮಾರಾಟ ಮಾಡಲು ತಿಳಿಸಲಾಗಿದೆ, ಮಿನಿ ಬಸ್‌ಗಳಿಗೆ 40 ಲೀಟರ್ ಮತ್ತು ಆಟೋರಿಕ್ಷಾ ಮತ್ತು ತ್ರಿಚಕ್ರ ವಾಹನಗಳಿಗೆ ದಿನಕ್ಕೆ 15 ಲೀಟರ್ ಮಾರಾಟ ಮಾಡಲು ತಿಳಿಸಲಾಗಿದೆ.