ಕಾಸರಗೋಡು: ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸಮಗ್ರ ಕೊಡುಗೆ ನೀಡಿದ ವಿಶಿಷ್ಟ ವ್ಯಕ್ತಿಗಳನ್ನು ಗೌರವಿಸುವ ನಿಟ್ಟಿನಲ್ಲಿರಾಜ್ಯ ಸರ್ಕಾರ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ 'ಕೇರಳ ರಾಜ್ಯ ಪುರಸ್ಕಾರ-2024' ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕೇರಳ ಜ್ಯೋತಿ, ಕೇರಳ ಪ್ರಭ ಮತ್ತು ಕೇರಳ ಶ್ರೀ ಎಂಬ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ. 2024 ರ ಕೇರಳ ರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಈ ವರ್ಷದ ಕೇರಳ ರಾಜ್ಯ ಪ್ರಶಸ್ತಿಗಳಿಗೆ ಅರ್ಜಿ (ನಾಮನಿರ್ದೇಶನ)ಗಳನ್ನು 2024 ಜುಲೈ 31ರ ವರೆಗೆ ಸಲ್ಲಿಸಬಹುದು. ಅರ್ಜಿ (ನಾಮನಿರ್ದೇಶನಗ)ಗಳನ್ನು https://keralapuraskaram.kerala.gov.in ಎಂಬ ವೆಬ್‍ಸೈಟ್ ಮೂಲಕ ಸಲ್ಲಿಸಬೇಕಾಗಿದ್ದು, ವೈಯಕ್ತಿಕವಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆನ್ ಲೈನ್ ನಲ್ಲಿ ಸಲ್ಲಿಸುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಕೇರಳ ಪ್ರಶಸ್ತಿಗಳ ಮಾರ್ಗಸೂಚಿಗಳ ನಾಮನಿರ್ದೇಶನ ಮಾಡುವಾಗ ಅನುಸರಿಸಬೇಕಾದ ಸೂಚನೆಗಳನ್ನು ವೆಬ್‍ಸೈಟ್‍ನ ಅಧಿಸೂಚನೆಯಲ್ಲಿ ನೀಡಲಾಗಿದೆ. ನಾಮನಿರ್ದೇಶನ ಸಂಬಂಧಿಸಿದ ಹೆಚ್ಚಿನ ವಿಚಾರಣೆಗಳಿಗಾಗಿ ದೂರವಾಣಿ ಸಂಖ್ಯೆ 0471 2518531, 2518223
ತಾಂತ್ರಿಕ ಸಹಾಯಕ್ಕಾಗಿ ಐಟಿ ಮಿಷನ್ ನ ದೂರವಾಣಿ ಸಂಖ್ಯೆ 0471 2525444 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.