ನವದೆಹಲಿ: ಸ್ಥೂಲ ಆರ್ಥಿಕತೆಯ ಹಲವು ಮಾನದಂಡಗಳನ್ನು ಉಲ್ಲೇಖಿಸಿರುವ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಭಾರತ 2025 ರ ವೇಳೆಗೆ ಜಪಾನ್ ನ್ನು ಹಿಂದಿಕ್ಕಿ 4 ನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದ್ದಾರೆ.
ಭಾರತದ ಜಿಡಿಪಿ ಈಗ 5 ನೇ ಶ್ರೇಣಿಯಲ್ಲಿದ್ದು ಅಮೇರಿಕಾ, ಚೀನಾ, ಜರ್ಮನಿ, ಜಪಾನ್ ನಂತರದ ಸ್ಥಾನದಲ್ಲಿದೆ.
ಒಂದು ದಶಕದ ಹಿಂದೆ ಭಾರತದ ಜಿಡಿಪಿ 11 ನೇ ಸ್ಥಾನದಲ್ಲಿತ್ತು. ಈಗ ಭಾರತದ ಜಿಡಿಪಿ 3.7 ಟ್ರಿಲಿಯನ್ ಡಾಲರ್ ನಷ್ಟಿದೆ. 2022 ರಲ್ಲಿ ಭಾರತ ಬ್ರಿಟನ್ ನ್ನು ಸರಿಗಟ್ಟಿತ್ತು.
ಅಮಿತಾಬ್ ಕಾಂತ್ ನೀಡಿರುವ ಮಾಹಿತಿಯ ಪ್ರಕಾರ, 2013 ರಲ್ಲಿ ದುರ್ಬಲವಾದ 5 ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತದ ಆರ್ಥಿಕತೆ 2024 ರಲ್ಲಿ ಟಾಪ್ 5 ಕ್ಕೆ ಏರಿಕೆಯಾಗುವುದಕ್ಕೆ ದಾಖಲೆಯ GST ಸಂಗ್ರಹ, ಕಳೆದ 3 ತ್ರೈಮಾಸಿಕಗಳಲ್ಲಿ ಶೇ.8 ರಷ್ಟು ಜಿಡಿಪಿ ಬೆಳವಣಿಗೆ, ಹಲವು ರಾಷ್ಟ್ರಗಳೊಂದಿಗೆ ರೂಪಾಯಿ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿರುವುದು ಹಾಗೂ ಇನ್ನಿತರ ಅಂಶಗಳು ಕಾರಣವಾಗಿದೆ.