ಮುಳ್ಳೇರಿಯ: ಬೆಳ್ಳೂರು ಅಡ್ವಳಬೀಡು ದರ್ಮದೈವ ಶ್ರೀ ಪಿಲಾಡ್ಕತ್ತಾಯ ದೈವದ ನೇಮ ಮೇ 20 ಮತ್ತು 21 ರಂದು ವಿವಿದ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ನೇಮಕ್ಕೆ ಗೊನೆ ಮುಹೂರ್ತ ಮೇ 14 ರಂದು ನಡೆಯಲಿದ್ದು, 20 ರಂದು ಸಂಜೆ 4 ಕ್ಕೆ ನಾಗ ತಂಬಿಲ, 6.30 ಕ್ಕೆ ಭಂಡಾರ ಏರಿಸುವುದು ನಡೆಯಲಿದೆ. ರಾತ್ರಿ 9 ಕ್ಕೆ ಅನ್ನಸಂತರ್ಪಣೆ, ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ 7.30 ಕ್ಕೆ ಗಮಕ ವಾಚನ, 8.30 ಕ್ಕೆ ಹರಿಕಥಾ ಸಂಕೀರ್ತನೆ, 9.30 ಕ್ಕೆ ವೈವಿಧ್ಯಮಯ ಸಾಂಸ್ಕøತಿ ಕಾರ್ಯಕ್ರಮ, 10.30 ಕ್ಕೆ ಸಂಗೀತ ರಸಮಂಜರಿ ನಡೆಯಲಿದೆ. ಮೇ 21 ರಂದು ಬೆಳಗ್ಗೆ 7 ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ, 8 ರಿಂದ ಭಜನಾ ಸಂಕೀರ್ತನೆ, 9.30 ಕ್ಕೆ ದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.