ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಸಾರ್ವಜನಿಕ ನಿಧಿಯ ಮೊದಲ ಕಂತು ರೂಪದಲ್ಲಿ ರಾಜ್ಯ ಸರ್ಕಾರ 210.51 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಮ ಪಂಚಾಯತ್ಗಳಿಗೆ 149.53 ಕೋಟಿ ರೂ. ಲಭಿಸಲಿದೆ.
ಬ್ಲಾಕ್ ಪಂಚಾಯತ್ಗಳಿಗೆ 10.02 ಕೋಟಿ ರೂ., ಜಿಲ್ಲಾ ಪಂಚಾಯತ್ಗಳಿಗೆ 7.05 ಕೋಟಿ ರೂ., ನಗರಸಭೆಗಳಿಗೆ 25.72 ಕೋಟಿ ರೂ. ಮತ್ತು ಕಾರ್ಪರೇಶನ್ಗಳಿಗೆ 18.18 ಕೋಟಿ ರೂ. ಲಭಿಸಲಿದೆ.