HEALTH TIPS

ಕೇರಳ ಸೌರ ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಬಲಪಡಿಸಲು ಅದಾನಿ ಗ್ರೂಪ್: ಮನೆಮನೆ ಸೌರ ಫಲಕ ಯೋಜನೆ ಮೂಲಕ 225 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ

                 ತಿರುವನಂತಪುರಂ: ರಾಜ್ಯದಲ್ಲಿ ಸೌರಶಕ್ತಿ ಮಾರುಕಟ್ಟೆ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ಅದಾನಿ ಸಮೂಹ ಮುಂದಡಿ ಇರಿಸಿದೆ. ಪ್ರಧಾನ ಮಂತ್ರಿ ಸೂರ್ಯಖರ್ ಯೋಜನೆಯಡಿಯಲ್ಲಿ ಮನೆಮನೆ ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಸಕ್ರಿಯವಾಗಲು ಅದಾನಿ ಸಮೂಹ ಯೋಜಿಸುತ್ತಿದೆ.

               ಇದರ ಭಾಗವಾಗಿ, ಕಂಪನಿಯು ಕೇರಳದ ಸೋಲಾರ್ ಪ್ಯಾನಲ್‍ಗಳ ಪ್ರಮುಖ ವಿತರಕ ಅಲ್ಮಿಯಾ ಗ್ರೂಪ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 225 ಮೆಗಾವ್ಯಾಟ್ ಸಾಮಥ್ರ್ಯದ ಮನೆಮನೆ ಸೌರ ಫಲಕ ಅನುಷ್ಠಾನ ಯೋಜನೆಯನ್ನು ಒಂದು ವರ್ಷದಲ್ಲಿ ಜಾರಿಗೊಳಿಸುವ ಗುರಿಯನ್ನು ಕಂಪನಿ ಹೊಂದಿದೆ.

                ಅದಾನಿ ಗ್ರೂಪ್‍ನ ಸೋಲಾರ್ ಪ್ಯಾನೆಲ್‍ಗಳಿಗೆ ಪ್ರಸ್ತುತ ಏಷ್ಯಾದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಕಂಪನಿಯು ಹೊಸದಾಗಿ ಪರಿಚಯಿಸಿದ ಪ್ಯಾನಲ್‍ಗಳಾದ ಟಾಪ್‍ಕಾನ್ ಎನ್‍ಟೈಪ್ ಪ್ಯಾನೆಲ್‍ಗಳು ಉತ್ಪಾದನಾ ಸಾಮಥ್ರ್ಯವನ್ನು ಹತ್ತು ಪಟ್ಟು ಹೊಂದಿವೆ. ಅದಾನಿ ಗ್ರೂಪ್ ಪ್ರಸ್ತುತ ತನ್ನ ವಿಝಿಂಜಂ ಬಂದರು ಅಭಿವೃದ್ಧಿ ಯೋಜನೆಗಳಲ್ಲಿ ಸೌರಶಕ್ತಿಯ ಸಾಮಥ್ರ್ಯವನ್ನು ಬಳಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದೆ.

             ಕೇರಳದಲ್ಲಿ ಇದುವರೆಗೆ 1000 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅದರಲ್ಲಿ ಮನೆಗಳಿಂದ 225 ಮೆಗಾವ್ಯಾಟ್ ಮಾತ್ರ ಉತ್ಪಾದನೆಯಾಗುತ್ತದೆ. ಅದರಲ್ಲಿ ಶೇ.50ರಷ್ಟು ಅದಾನಿ ಸೋಲಾರ್ ಯೋಜನೆಯಾಗಿದೆ. ಪ್ರಸ್ತುತ ಅಲ್ಮಿಯಾ ಗ್ರೂಪ್ ಕೇರಳದಲ್ಲಿ ಅದಾನಿ ಗ್ರೂಪ್‍ನ ಸೌರ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅಲ್ಮಿಯಾ ಗ್ರೂಪ್ ಕೇರಳದ ಅನರ್ಟ್, ಕೆಎಸ್‍ಇಬಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಅದಾನಿ ಸೋಲಾರ್ ಪ್ಯಾನೆಲ್‍ಗಳನ್ನು ಅಳವಡಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries