HEALTH TIPS

ವೆಂಗೂರಿನಲ್ಲಿ ಹಳದಿ ಜ್ವರದಿಂದ ಮತ್ತೊಬ್ಬ ವ್ಯಕ್ತಿ ಸಾವು; 227 ಮಂದಿಗೆ ಸೋಂಕು: ಸಂಕಷ್ಟದಲ್ಲಿ ಗ್ರಾಮ

                 ಕೊಚ್ಚಿ: ಹಳದಿ ಜ್ವರ ಹರಡುತ್ತಿರುವ ಎರ್ನಾಕುಳಂ ಜಿಲ್ಲೆಯ ಪೆರುಂಬವೂರ್ ಬಳಿಯ ವೆಂಗೂರ್‍ನಲ್ಲಿ ಮತ್ತೊಂದು ಸಾವು ದೃಢಪಟ್ಟಿದೆ.

               ಕರಿಯಂಬುರತ್ ಕಾತ್ರ್ಯಾನಿ (51) ಹಳದಿ ಜ್ವರದಿಂದ ಮೃತಪಟ್ಟಿದ್ದಾರೆ. ಜಾಂಡೀಸ್‍ನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ರಾತ್ರಿ 10 ಗಂಟೆಗೆ ಮೃತಪಟ್ಟಿದ್ದಾರೆ.

             ಜಾಂಡೀಸ್ ಇರುವುದು ಪತ್ತೆಯಾದ ನಂತರ, ಕಾತ್ರ್ಯಾಯನಿ ಅವರನ್ನು ಮೊದಲು ಪೆರುಂಬವೂರ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ತಜ್ಞ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಯಿತು. ಎರಡು ವಾರಗಳ ಕಾಲ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು

            ಪೆರುಂಬವೂರಿನಲ್ಲಿ ಹಳದಿ ಜ್ವರ ಪೀಡಿತರ ಸಂಖ್ಯೆ 227 ಕ್ಕೆ ತಲುಪಿದೆ. ಸುಮಾರು 45 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

            ಏಪ್ರಿಲ್ 17 ರಂದು ಈ ಪಂಚಾಯತ್‍ನ ಕೈಪಲ್ಲಿಯಲ್ಲಿ ಕುಟುಂಬವೊಂದರಲ್ಲಿ ಹಳದಿ ಜ್ವರ ಪ್ರಕರಣ ವರದಿಯಾಗಿದೆ. ನಂತರ ಇತರ ಕೆಲವು ವಾರ್ಡ್‍ಗಳಲ್ಲಿಯೂ ಸೋಂಕು ದೃಢಪಟ್ಟಿತ್ತು. ತಡವಾಗಿ, ಹಳದಿ ಜ್ವರ ಹರಡುವ ಅನುಮಾನ ವ್ಯಕ್ತವಾಯಿತು. 

           ಅದರ ನಂತರ ವಿವರವಾದ ತನಿಖೆ ಪ್ರಾರಂಭವಾಯಿತು. ವಕುವಳ್ಳಿಯ ಜಲಪ್ರಾಧಿಕಾರದ ಜಲಾಶಯದಿಂದ ಕುಡಿಯುವ ನೀರು ಬಳಸಿದ ಜನರಿಗೆ ಸೋಂಕು ತಗುಲಿದ್ದು, ಜನರು ಅವಲಂಬಿಸಿರುವ ಏಕೈಕ ನೀರಿನ ಮೂಲವಾಗಿರುವ ಜಲಮಂಡಳಿ ನೀರನ್ನು ಶುದ್ಧೀಕರಿಸದೆ ನೀರು ಹರಿಸಿದೆ ಎಂಬ ಆರೋಪ ಕೇಳಿಬಂದಿದೆ. ಕೂಲಿ ಕಾರ್ಮಿಕರು ಮತ್ತು ಬಡ ಜನರು ಈ ಪ್ರದೇಶವಾಸಿಗಳಾಗಿದ್ದಾರೆ.

              ಅನೇಕ ಮನೆಗಳಲ್ಲಿ, ಸಂಪೂರ್ಣ ಸದಸ್ಯರು ಸೋಂಕಿಗೆ ಒಳಗಾಗಿದ್ದಾರೆ. ಆಸ್ಪತ್ರೆಯಲ್ಲಿ ಇರುವ ಎಷ್ಟೋ ಮಂದಿ ಚಿಕಿತ್ಸಾ ವೆಚ್ಚಕ್ಕಾಗಿ ಲಕ್ಷಗಟ್ಟಲೆ ಹಣಕ್ಕೆ ಪರದಾಡುತ್ತಿರುವುದೂ ಕಂಡುಬಂದಿದೆ. ಅವರಲ್ಲಿ ಹೆಚ್ಚಿನವರು ದಿನಗೂಲಿಯಾಗಿ ಕಾರ್ಮಿಕರಾಗಿದ್ದಾರೆ. 

            ನೀರಿನ ತೊಟ್ಟಿಯ ಪಕ್ಕದಲ್ಲಿರುವ ಪುಲಚಿರಾ ಎಂಬ ಸಣ್ಣ ಕೆರೆಯ ನೀರನ್ನು ಬಾವಿಯಿಂದ ಪಂಪ್ ಮಾಡಲಾಗುತ್ತದೆ. ನೀರಿನ ಕೊರತೆಯಿಂದ ಕಾಲುವೆಯ ನೀರನ್ನು ಇಲ್ಲಿಗೆ ತಿರುಗಿಸಲಾಗುತ್ತಿದೆ ಎಂದು ವರದಿಯಾಗಿದೆ. ಅದನ್ನು ಕ್ಲೋರಿನೇಟ್ ಮಾಡಿ ನಂತರ ಪಂಪ್ ಮಾಡಲಾಯಿತು.

           ಆದರೆ ಜಾಂಡೀಸ್ ಹರಡಿದ ನಂತರ ಪಂಚಾಯ್ತಿ ಅಧಿಕಾರಿಗಳು ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಕ್ಲೋರಿನ್ ಅಂಶ ಪತ್ತೆಯಾಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಂಗಾಮಿ ಸಿಬ್ಬಂದಿಯ ಅನುಭವದ ಕೊರತೆಯೇ ಕ್ಲೋರಿನೇಷನ್ ವೈಫಲ್ಯಕ್ಕೆ ಕಾರಣ ಎನ್ನುತ್ತಾರೆ ಜಲಮಂಡಳಿ ಅಧಿಕೃತರು.

              ಪಂಪಿಂಗ್‍ನಲ್ಲಿನ ಸಮಸ್ಯೆಗಳಿಗೆ ದಿನಗಟ್ಟಲೆ ದುರಸ್ಥಿ ಮಾಡಬೇಕಿದ್ದು, ನೀರಿನಿಂದ ರೋಗ ಹರಡುವ ಪರಿಸ್ಥಿತಿ ಇದೆ ಎಂಬ ವಾದ ಮಂಡಿಸಿ ಜಲ ಪ್ರಾಧಿಕಾರ ಕೈತೊಳೆದುಕೊಳ್ಳುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries