HEALTH TIPS

ಶೈಕ್ಷಣಿಕ ವರ್ಷದ ಆರಂಭ-ಮೇ 24ರಿಂದ ಶಾಲಾ ಸುರಕ್ಷತಾ ಪರಿಶೋಧನೆ: ಸಮಾಲೋಚನಾ ಸಭೆ

           ಕಾಸರಗೋಡು: ಹೊಸ ಶೈಕ್ಷಣಿಕ ವರ್ಷದ ತರಗತಿ ಜೂನ್ 3ರಂದು ಆರಂಭಗೊಳ್ಳಲಿದ್ದು, ಈ ಬಗ್ಗೆ ತಯಾರಿ ತಯಾರಿ ಹಿನ್ನೆಲೆಯಲ್ಲಿ ಶಾಲಾ ಸುರಕ್ಷತಾ ಪರಿಶೋಧನೆ ನಡೆಸಲಾಗುವುದು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ, ಶಾಲಾ ಶಿಕ್ಷಕರು ಹಾಗೂ ಪಿಟಿಎ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಆಯ್ಕೆಯಾದ ಶಿಕ್ಷಕರಿಗೆ ಶಾಲಾ ಭದ್ರತೆ ಕುರಿತು ತರಬೇತಿ ನೀಡಲಾಗಿದ್ದು, ಈ ಸಂಪನ್ಮೂಲ ವ್ಯಕ್ತಿಗಳು ಜಿಲ್ಲೆಯ ಎಲ್ಲಾ ಶಾಲೆಗಳ ಭದ್ರತಾ ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ವಿ. ದಿನೇಶ್ ಹೇಳಿದರು.

             ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಜಿ ಉಪನಿರ್ದೇಶಕ ಎನ್.ನಂದಿಕೇಶನ್ ನೇತೃತ್ವದಲ್ಲಿ ಮೊದಲ ಹಂತದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 84 ಶಾಲೆಗಳಲ್ಲಿ ಸುರಕ್ಷತಾ ಲೆಕ್ಕ ಪರಿಶೋಧನೆ ನಡೆಯಲಿದ್ದು, ನಂತರ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಾದ ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ.ಶಾಲೆಗಳಲ್ಲಿಯೂ ಲೆಕ್ಕ ಪರಿಶೋಧನೆ ನಡೆಸಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ ಶಾಲಾ ಸುರಕ್ಷತಾ ಲೆಕ್ಕಪರಿಶೋಧನೆ ನಡೆಸುವ ಭಾಗವಾಗಿ ಸುಮಾರು 100 ತರಬೇತುದಾರರು ಕಾರ್ಯನಿರ್ವಹಿಸಲಿದ್ದಾರೆ. ನಾಲ್ಕರಿಂದ ಐದು ಮಂದಿಯನ್ನೊಳಗೊಂಡ ತಂಡಗಳು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ತಪಾಸಣೆ ನಡೆಸಿ ಶಾಲೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಿವೆ.

                 ಶಾಲಾ ವಠಾರವನ್ನು ಸಂಪೂರ್ಣ ಮಾದಕಪದಾರ್ಥ ಮುಕ್ತ ಪ್ರದೇಶವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಅಬಕಾರಿ ಇಲಾಖೆಯ ನೇತೃತ್ವದಲ್ಲಿ ``ನೇರ ಹಾದಿ' ಯೋಜನೆ ಜಾರಿಗೊಳಿಸಲಾಗುತ್ತಿದ್ದು, ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳ ದಾಸರಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅಬಕಾರಿ ಉಪ ಆಯುಕ್ತ ಪಿ.ಕೆ. ಜಯರಾಜ್ ಮಾತನಾಡಿ, ಮಾದಕ ಪದಾರ್ಥ ವ್ಯಸನಿಗಳಾಗಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿದ ತಕ್ಷಣ ಅಬಕಾರಿ ಇಲಾಖೆಯ ಆಪ್ತ ಸಮಾಲೋಚಕರೊಂದಿಗೆ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಯೋಜನೆ ಇದಾಗಿದೆ.  ಶಾಲಾ ಸುರಕ್ಷತಾ ಪರಿಶೋಧನಾ ಸಮಿತಿ ಜತೆ, ಶಾಲಾ ವ್ಯಾಪ್ತಿಯ ಅಂಗಡಿ ಮಾಲಿಕರನ್ನೂ ಸಮಿತಿಗೆ ಸೇರಿಸಬೇಕು. ಪ್ರದೇಶಗಳು. ಶಾಲಾ ಶಾಲಾ ಸುರಕ್ಷತಾ ಪರಿಶೋಧನಾ ಸಮಿತಿಗೆ ಅಬಕಾರಿ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

             ಶಾಲಾ ವಾಹನಗಳ ತಪಾಸಣೆ ಹಾಗೂ ಸುರಕ್ಷತೆಯನ್ನು ಖಾತ್ರಿಪಡಿಸಲಾಗುವುದು ಎಂದು ಮೋಟಾರು ವಾಹನ ಇಲಾಖೆಯ ಪ್ರತಿನಿಧಿ ತಿಳಿಸಿದರು. ಶಾಲೆಗಳಲ್ಲಿ ಕೆಎಸ್‍ಇಬಿಗೆ ಸಂಬಂಧಿಸಿದ ನಾನಾ ಸಮಸ್ಯೆಗಳು, ರಾಷ್ಟ್ರೀಯ ಹೆದ್ದಾರಿ ಸನಿಹದ ಶಾಲೆಗಳ ಮಕ್ಕಳು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಾಗಿ ಶಾಲಾ ಆವರಣದ ಸುತ್ತಲಿನ ರಸ್ತೆಗಳಲ್ಲಿ ಗೃಹರಕ್ಷಕ ದಳದ ಸೇವೆಯನ್ನು ಒದಗಿಸುವಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಒತ್ತಾಯಿಸಿದರು. 

           ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳು, ಕೆಎಸ್‍ಇಬಿ, ಆರೋಗ್ಯ, ಪೆÇಲೀಸ್ , ಮೋಟಾರು ವಾಹನ ಇಲಾಖೆ ಪ್ರತಿನಿಧಿಗಳು, ಶಾಲಾ ಮುಖ್ಯ ಶಿಕ್ಷಕರು, ಪಿಟಿಎ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ವಿ. ದಿನೇಶ್ ಸ್ವಾಗತ ಹಾಗೂ ಶಿಕ್ಷಣ ಉಪನಿರ್ದೇಶನಾಲಯದ ಕಛೇರಿ ಕಿರಿಯ ಅಧೀಕ್ಷಕ ಕೆ. ಬಾಬುರಾಜ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries