ನವದೆಹಲಿ: ಏಕಾಏಕಿ ಅನಾರೋಗ್ಯದ ರಜೆ ಹಾಕಿ 90 ವಿಮಾನಗಳ ಹಾರಾಟ ರದ್ದಾಗಲು ಕಾರಣರಾದ ಕ್ಯಾಬಿನ್ ಸಿಬ್ಬಂದಿ ಪೈಕಿ 25 ಮಂದಿಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೆಲಸದಿಂದ ವಜಾ ಮಾಡಿ ಆದೇಶಿಸಿದೆ.
ನವದೆಹಲಿ: ಏಕಾಏಕಿ ಅನಾರೋಗ್ಯದ ರಜೆ ಹಾಕಿ 90 ವಿಮಾನಗಳ ಹಾರಾಟ ರದ್ದಾಗಲು ಕಾರಣರಾದ ಕ್ಯಾಬಿನ್ ಸಿಬ್ಬಂದಿ ಪೈಕಿ 25 ಮಂದಿಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೆಲಸದಿಂದ ವಜಾ ಮಾಡಿ ಆದೇಶಿಸಿದೆ.
ರಜೆ ಹಾಕಿದ್ದ ಇನ್ನುಳಿದ ಸಿಬ್ಬಂದಿ ಸಂಜೆ 4 ಗಂಟೆ ಒಳಗೆ ಕೆಲಸಕ್ಕೆ ಹಾಜರಾಗುವಂತೆ ಸಂಸ್ಥೆ ಡೆಡ್‌ಲೈನ್ ವಿಧಿಸಿದೆ.
ಕ್ಯಾಬಿನ್ ಸಿಬ್ಬಂದಿ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಇಂದೂ 60 ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕ್ಯಾಬಿನ್ ಸಿಬ್ಬಂದಿ ಸಾಮೂಹಿಕ ರಜೆ ಹಾಕಿರುವುದು ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ.
500ಕ್ಕೂ ಅಧಿಕ ಹಿರಿಯ ಸಿಬ್ಬಂದಿ ಸೇರಿ 1,400ಕ್ಕೂ ಅಧಿಕ ಕ್ಯಾಬಿನ್ ಸಿಬ್ಬಂದಿ ಇದ್ದಾರೆ.
ಆಡಳಿತ ಮಂಡಳಿಯ ಅವ್ಯವಸ್ಥೆ ಖಂಡಿಸಿ 200ಕ್ಕೂ ಹೆಚ್ಚು ಹಿರಿಯ ಸಿಬ್ಬಂದಿ ಮಂಗಳವಾರದಿಂದ ರಜೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ 90ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದೆ.