ನವದೆಹಲಿ: ದೇಶದ ಪ್ರಮುಖ ಜಲಾಶಯಗಳಲ್ಲಿ ಅವುಗಳ ಗರಿಷ್ಠ ಸಂಗ್ರಹ ಸಾಮರ್ಥ್ಯದ ಶೇ 25ರಷ್ಟು ಮಾತ್ರ ನೀರು ಲಭ್ಯ ಇದೆ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ವಾರದ ಬುಲೆಟಿನ್ ತಿಳಿಸಿದೆ.
ನವದೆಹಲಿ: ದೇಶದ ಪ್ರಮುಖ ಜಲಾಶಯಗಳಲ್ಲಿ ಅವುಗಳ ಗರಿಷ್ಠ ಸಂಗ್ರಹ ಸಾಮರ್ಥ್ಯದ ಶೇ 25ರಷ್ಟು ಮಾತ್ರ ನೀರು ಲಭ್ಯ ಇದೆ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ವಾರದ ಬುಲೆಟಿನ್ ತಿಳಿಸಿದೆ.
ಪ್ರಮುಖ 150 ಜಲಾಶಯಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 178.784 ಬಿಸಿಎಂ (ಶತಕೋಟಿ ಘನ ಮೀಟರ್ಗಳು) ಇದೆ.
ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಲ್ಲಿನ 42 ಪ್ರಮುಖ ಜಲಾಶಯಗಳಲ್ಲಿ ಗರಿಷ್ಠ ನೀರಿನ ಸಂಗ್ರಹಣಾ ಸಾಮರ್ಥ್ಯ 53.334 ಬಿಸಿಎಂನಷ್ಟಾಗಿದೆ. ಇವುಗಳಲ್ಲಿ ಪ್ರಸ್ತುತ 7.494 ಬಿಸಿಎಂನಷ್ಟು (ಶೇ 14) ಮಾತ್ರ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 24ರಷ್ಟು ನೀರಿನ ಸಂಗ್ರಹ ಇತ್ತು ಎಂದು ಆಯೋಗದ ಅಂಕಿ ಅಂಶಗಳು ತಿಳಿಸಿವೆ.