ಮಲಪ್ಪುರಂ: ಪ್ರಯಾಣದ ವೇಳೆ ರೈಲಿನೊಳಗೆ ವೈದ್ಯರೊಬ್ಬರಿಗೆ ಹಾವು ಕಚ್ಚಿದ ಘಟನೆ ನಡೆದಿದೆ. ನಿಲಂಬೂರು-ಶೋರ್ನೂರು ಪ್ಯಾಸೆಂಜರ್ ನಲ್ಲಿ ಈ ಘಟನೆ ನಡೆದಿದೆ.
ಆಯುರ್ವೇದ ವೈದ್ಯೆ ಗಾಯತ್ರಿ (25) ಎಂಬವರಿಗೆ ಹಾವು ಕಚ್ಚಿದೆ. ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ 8.15ರ ಸುಮಾರಿಗೆ ಈ ಘಟನೆ ನಡೆದಿದೆ. ವಲ್ಲಪುಳ ನಿಲ್ದಾಣವನ್ನು ತಲುಪಿದಾಗ, ಮುಂಭಾಗದ ಜನರಲ್ ಕಂಪಾರ್ಟ್‍ಮೆಂಟ್‍ನಲ್ಲಿ ಪ್ರಯಾಣಿಸುತ್ತಿದ್ದ ಗಾಯತ್ರಿ ತನಗೆ ಹಾವು ಕಚ್ಚಿದೆ ಎಂದು ಹೇಳಿ ಹೊರಬಂದಳು. ಬರ್ತ್‍ನಲ್ಲಿ ಹಾವು ಇತ್ತು ಮತ್ತು ಇತರ ಪ್ರಯಾಣಿಕರು ಹಾವನ್ನು ನೋಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಅವರ ಕಾಲುಗಳನ್ನು ಬಟ್ಟೆಯಿಂದ ಕಟ್ಟಲಾಯಿತು. ನಂತರ ಪ್ರಯಾಣಿಕರು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಂದ ಪೆರಿಂತಲ್ಮಣ್ಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಮಹಿಳೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಲಂಬೂರಿನಿಂದ ರೈಲಿನಲ್ಲಿ ಬಂದ ಗಾಯತ್ರಿ ಕೊಟ್ಟಾಯಂನಲ್ಲಿ ಓದುತ್ತಿದ್ದಾರೆ. ಶೋರ್ನೂರಿನಲ್ಲಿ ಇಳಿಯಲು ಹೊರಟಿದ್ದಾಗ ಇಂತಹ ಘಟನೆ ನಡೆದಿದೆ. ಪರೀಕ್ಷೆ ನಡೆಸಿದ ನಂತರವೇ ಹೆಚ್ಚಿನ ಮಾಹಿತಿ ತಿಳಿಯಬಹುದು. ಮಹಿಳೆಯ ಕಾಲಿನಲ್ಲಿ ಹಾವು ಕಚ್ಚಿದ ಗುರುತುಗಳಿವೆ ಎಂದು ಇತರೆ ಪ್ರಯಾಣಿಕರು ತಿಳಿಸಿದ್ದಾರೆ.
ರೈಲು ಶೋರ್ನೂರ್ ತಲುಪಿದಾಗ ರೈಲ್ವೇ ಅಧಿಕಾರಿಗಳು ಕೋಚ್ ಪರಿಶೀಲಿಸಿದರು. ಆದರೆ, ಏನೂ ಪತ್ತೆಯಾಗಿಲ್ಲ ಎಂದು ಪಾಲಕ್ಕಾಡ್ ರೈಲ್ವೆ ವಿಭಾಗ ಕಚೇರಿಯಿಂದ ಮಾಹಿತಿ ನೀಡಲಾಗಿದೆ.
ಏಪ್ರಿಲ್ 15ರಂದು ಇದೇ ರೀತಿಯ ಘಟನೆ ನಡೆದಿತ್ತು. ಅಂದು ಗುರುವಾಯೂರು-ಮಧುರೈ ಎಕ್ಸ್‍ಪ್ರೆಸ್‍ನ ಪ್ರಯಾಣಿಕರಿಗೆ ಹಾವು ಕಚ್ಚಿತ್ತು. ರೈಲು ಏಟುಮನೂರು ತಲುಪಿದಾಗ ಬೋಗಿ ನಂಬರ್ ಏಳರಲ್ಲಿ ಪ್ರಯಾಣಿಸುತ್ತಿದ್ದ ಮಧುರೈ ಮೂಲದ ಕಾರ್ತಿಕ್ (21) ಹಾವು ಕಚ್ಚಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ನಂತರ ಆಂಬುಲೆನ್ಸ್‍ನಲ್ಲಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ತನಗೆ ಕಚ್ಚಿದ್ದು ಹಾವು ಎಂದು ಕಾರ್ತಿ ಹೇಳಿದ್ದರು. ರೈಲಿನೊಳಗೆ ಹಾವು ಕಂಡಿರುವುದಾಗಿಯೂ ವೈದ್ಯರಿಗೆ ತಿಳಿಸಿದ್ದಾರೆ.
ರೈಲು ಕೊಟ್ಟಾಯಂ ರೈಲು ನಿಲ್ದಾಣ ತಲುಪಿದ ಬಳಿಕ ಏಳನೇ ಬೋಗಿಯ ಪ್ರಯಾಣಿಕರನ್ನು ಬೇರೆಡೆಗೆ ಸ್ಥಳಾಂತರಿಸಿ ಬೋಗಿಯನ್ನು ಸೀಲ್ ಮಾಡಲಾಯಿತು. ಬಳಿಕ ಬೋಗಿಯನ್ನು ಪರಿಶೀಲಿಸಿದರೂ ಹಾವು ಪತ್ತೆಯಾಗಿರಲಿಲ್ಲ.
ಕಾರ್ತಿಕ್‍ಗೆ ಹಾವು ಕಚಿರುವ ಬಗ್ಗೆ ರೈಲ್ವೆ ಪೆÇಲೀಸರು ಶಂಕಿಸಿದ್ದರು. ಇಲಿ ಕಚ್ಚಿರಬಹುದು ಎಂದು ಪೋಲೀಸರ ಶಂಕೆ. ಪರೀಕ್ಷೆಯ ನಂತರವೇ ಈ ಬಗ್ಗೆ ಖಚಿತ ಪಡಿಸಬಹುದು ಎಂದು ಪೆÇಲೀಸರು ತಿಳಿಸಿದ್ದಾರೆ. ಕಾರ್ತಿಕ್ ಅವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾಯೂರು ನಿಲ್ದಾಣದಲ್ಲಿ ಬಹಳ ಹೊತ್ತು ನಿಲ್ಲುವ ರೈಲು ಇದಾಗಿದೆ. ಈ ಹಿಂದೆ ರೈಲಿನೊಳಗೆ ಇಲಿಗಳ ಕಾಟದ ಬಗ್ಗೆಯೂ ವರದಿಯಾಗಿತ್ತು.