HEALTH TIPS

ಪಂಬಾ-ಶಬರಿಮಲೆ ರೋಪ್‍ವೇ: 27ರಂದು ಹೈಕೋರ್ಟ್ ವಿಚಾರಣೆ

                 ಪತ್ತನಂತಿಟ್ಟ: ಪಂಬಾದಿಂದ ಶಬರಿಮಲೆ ಸನ್ನಿಧಿಗೆ ರೋಪ್‍ವೇ ನಿರ್ಮಾಣವನ್ನು ಹೈಕೋರ್ಟ್‍ನ ದೇವಸ್ವಂ ಪೀಠ ಇದೇ 27ರಂದು ಪರಿಗಣಿಸಲಿದೆ.

                     ಸನ್ನಿಧಾನಕ್ಕೆ ಪೂಜಾ ಸಾಮಗ್ರಿಗಳನ್ನು ತಲುಪಿಸಲು ಅನುಕೂಲ ಮಾಡಿಕೊಡುವುದು ರೋಪ್‍ವೇ ಉದ್ದೇಶವಾಗಿದೆ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆಯಾಗಿ ಬಳಸಿಕೊಳ್ಳುವ ಯೋಜನೆಯೂ ಇದೆ. ಹಲವು ಅಧ್ಯಯನಗಳನ್ನು ನಡೆಸಿ ರೋಪ್ ವೇ ಯೋಜನೆ ಸಿದ್ಧಪಡಿಸಲಾಗಿದೆ. 2019ರಲ್ಲಿ ಸಿದ್ಧಪಡಿಸಿದ ಯೋಜನೆಗೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು.

                ಸುಮಾರು 500 ಮರಗಳನ್ನು ಕಡಿಯಬೇಕಾಗುತ್ತದೆ ಎಂಬುದು ಅರಣ್ಯ ಇಲಾಖೆಯ ವಿರೋಧಕ್ಕೆ ಕಾರಣವಾಗಿದೆ. ಆದರೆ ಹೊಸ ಯೋಜನೆ ಪ್ರಕಾರ 50 ಮರಗಳನ್ನು ಕಡಿದರೆ ಸಾಕು. ಕಡಿಯಬೇಕಾದ ಮರಗಳ ಸಂಖ್ಯೆಯನ್ನು ಕಡಮೆ ಮಾಡಲು ಈ ಹಿಂದೆ 30 ಮೀಟರ್ ಎತ್ತರವನ್ನು ಕಲ್ಪಿಸಲಾಗಿದ್ದ ಕಂಬಗಳನ್ನು 60 ಮೀಟರ್‍ಗೆ ಹೆಚ್ಚಿಸಲಾಗಿದೆ. ಪಂಬಾ- ಸನ್ನಿಧಾನಂ ರಸ್ತೆಯ ಮೂಲಕ 5 ಕಿ.ಮೀ.ಇದ್ದು, ಇದು ವೈಮಾನಿಕ ಮಾರ್ಗವಾಗಿರುವುದರಿಂದ ರೋಪ್ ವೇ ಉದ್ದ ಕೇವಲ 2.67 ಕಿ.ಮೀ. ಅಡ್ವೊಕೇಟ್ ಕಮಿಷನ್ ಈ ತಿಂಗಳ ಆರಂಭದಲ್ಲಿ ಎಎಸ್ಪಿ ಕುರುಪ್ ಅವರ ಸಮ್ಮುಖದಲ್ಲಿ ಹೊಸ ಸಮೀಕ್ಷೆಯನ್ನು ನಡೆಸಿತು.

                 ಈ ವರದಿ ಆಧರಿಸಿ ಹೈಕೋರ್ಟ್ ಪೀಠ ಇದೇ 27ರಂದು ವಿಚಾರಣೆ ನಡೆಸಲಿದೆ. ಮಾಳಿಗಪ್ಪುರಂ ಪೋಲೀಸ್ ಬ್ಯಾರಕ್‍ನ ಹಿಂಭಾಗದಿಂದ ಪಂಬಾ ತಲುಪಲು ರೋಪ್‍ವೇ ಯೋಜಿಸಲಾಗಿದೆ. ಎರಡೂ ಸ್ಥಳಗಳಲ್ಲಿ ರೋಪ್‍ವೇ ನಿಲ್ದಾಣ, ಗೋದಾಮು ಮತ್ತು ಕಚೇರಿಯನ್ನು ನಿರ್ಮಿಸಲಾಗುವುದು. ಯೋಜನೆಗೆ 150 ಕೋಟಿ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries