ಮಂಜೇಶ್ವರ: ಕುಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಲ್.ಪಿ.ಎಸ್.ಎ.ಕನ್ನಡ ಹುದ್ದೆಗೆ ದಿನವೇತನ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಏರ್ಪಡಿಸಲಾಗಿದೆ. ಮೇ.29 ರಂದು ಬುಧವಾರ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಅರ್ಹರು ದಾಖಲೆ ಪತ್ರಗಳೊಮದಿಗೆ ಭಾಗವಹಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗೆ: 6282612123 ಸಂಖ್ಯೆಗೆ ಸಂಪರ್ಕಿಸಬಹುದು.
……………………………………………………………………………………………………………
ಉಪ್ಪಳ ಸರ್ಕಾರಿ ಶಾಲೆಯಲ್ಲಿ
ಉಪ್ಪಳ: ಉಪ್ಪಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿವಿಧ ಶಿಕ್ಷಕ ಹುದ್ದೆಗಳು ತೆರವಾಗಿದ್ದು, ದಿನವೇತನ ಆಧಾರದಲ್ಲಿ ನೇಮಕಾತಿ ನಡೆಸಲು ಮೇ 30ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಸನ ನಡೆಯುವುದು. ಎಚ್‍ಎಸ್‍ಟಿ ಫಿಸಿಕಲ್ ಸಯನ್ಸ್ ಕನ್ನಡ, ಎಚ್‍ಎಸ್‍ಟಿ ನ್ಯಾಚುರಲ್ ಸಯನ್ಸ್ ಮಲಯಾಳ, ಎಚ್‍ಎಸ್‍ಟಿ ಫಿಸಿಕಲ್ ಸಯನ್ಸ್ ಮಲಯಾಳ, ಎಚ್‍ಎಸ್‍ಟಿ ಡ್ರಾಯಿಂಗ್, ಎಚ್‍ಎಸ್‍ಟಿ ಇಂಗ್ಲಿಷ್, ಯುಪಿಎಸ್‍ಟಿ ಮಲಯಾಳ, ಯುಪಿಎಸ್ಟಿ ಕನ್ನಡ ಹಾಗೂ ಜ್ಯೂನಿಯರ್‍ಲ್ಯಾಂಗ್ವೇಜ್ ಹಿಂದಿಗೆ ತಲಾ ಒಂದು ಹುದ್ದೆಗಾಗಿ ಸಂದರ್ಶನ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
……………………………………………………………………………………………………………
ಜೂ. 1ರಂದು ಪಡ್ರೆಶಾಲೆಯಲ್ಲಿ ಸಂದರ್ಶನ:
ಎಣ್ಮಕಜೆ ಪಂಚಾಯಿತಿಯ ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ತೆರವಾಗಿರುವ ಗಣಿತ ( ಕನ್ನಡ), ಹಿಂದಿ ಶಿಕ್ಷಕ ಹುದ್ದೆಗಳಿಗೆ ದಿನ ವೇತನದನ್ವಯ ನೇಮಕಾತಿ ನಡೆಸಲು ಜೂ.1ರಂದು ಬೆಳಗ್ಗೆ 10ಕ್ಕೆ ಸಂದರ್ಶನ ನಡೆಯಲಿದೆ.
ಅರ್ಹ ಆಸಕ್ತ ಉದ್ಯೋಗಾರ್ಥಿಗಳು ಅಸಲಿ ಪ್ರಮಾಣಪತ್ರಗಳೊಂದಿಗೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗುಂತೆ ಶಾಲಾ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.