ತಿರುವನಂತಪುರ: ಹಣಕಾಸು ಇಲಾಖೆಯು ಡಿಸೆಂಬರ್‍ನಲ್ಲಿ ಬಾಕಿ ಇರುವ ಕಲ್ಯಾಣ ಪಿಂಚಣಿಯನ್ನು ಬುಧವಾರದಿಂದ ಪಾವತಿಸಲಿದೆ. ಮೇ ಸೇರಿ ಇನ್ನೂ ಐದು ತಿಂಗಳ ಬಾಕಿ ವಿತರಿಸಲು ಉಳಿದುಕೊಂಡಿದೆ.
48.7 ಲಕ್ಷ ಜನರಿಗೆ ಸಾಮಾಜಿಕ ಭದ್ರತಾ ಪಿಂಚಣಿ ಮತ್ತು 5.9 ಲಕ್ಷ ಜನರಿಗೆ ಕಲ್ಯಾಣ ಮಂಡಳಿ ಪಿಂಚಣಿ ತಲಾ 1600 ರೂ.ನೀಡಲಾಗುತ್ತದೆ. ಇದಕ್ಕಾಗಿ 830 ಕೋಟಿ ರೂ.ಬಿಡುಗಡೆಗೊಳಿಸಲಾಗಿದೆ.
ಕೇಂದ್ರ ಸರ್ಕಾರ ಡಿಸೆಂಬರ್ ವರೆಗೆ ಕೇರಳಕ್ಕೆ 18,283 ಕೋಟಿ ಸಾಲ ಪಡೆಯಲು ಅವಕಾಶ ನೀಡಿತ್ತು. ಇದರಲ್ಲಿ ಮಂಗಳವಾರ 3500 ಕೋಟಿ ರೂ.ಪಡೆಯಲಾಗುವುದು. ಇದನ್ನು ಪಡೆದ ನಂತರ ಸರ್ಕಾರವು ಕಲ್ಯಾಣ ಪಿಂಚಣಿ ಕಂಪನಿಗೆ ಪಾವತಿಸುತ್ತದೆ.