ಕೊಟ್ಟಾಯಂ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯ ಹೌಸ್ ಸರ್ಜನ್ ಆಗಿದ್ದ ಡಾ. ವಂದನಾ ದಾಸ್ ಹತ್ಯೆ ಪ್ರಕರಣದ ತೀರ್ಪನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ.ಎನ್.ವಿನೋದ್ 29ರಂದು ಪ್ರಕಟಿಸಲಿದ್ದಾರೆ.
ಆರೋಪಪಟ್ಟಿ ಮತ್ತು ಪ್ರತಿವಾದಿ ಸಲ್ಲಿಸಿದ ಪರಿಹಾರ ಅರ್ಜಿಯ ಮೇಲಿನ ವಾದವನ್ನು ಪೂರ್ಣಗೊಳಿಸಲಾಗಿದೆ. ಕಳೆದ ವರ್ಷ ಪೋಲೀಸ್ ಕ್ಯಾಂಪ್ ನಿಂದ ವೈದ್ಯಕೀಯ ಪರೀಕ್ಷೆಗೆಂದು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಗೆ ಕರೆತಂದಿದ್ದ ಚೆರುಕರಕೋಣಂ ನಿವಾಸಿ ಸಂದೀಪ್ ನಿಂದ ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಡಾ.ವಂದನಾ ದಾಸ್ ಸಾವನ್ನಪ್ಪಿದ್ದರು. ದಾಳಿಯಲ್ಲಿ ಪೋಲೀಸ್ ಅಧಿಕಾರಿಗಳು ಸೇರಿದಂತೆ 5 ಜನರು ಗಾಯಗೊಂಡಿದ್ದರು.
ಆರೋಪಿ ಸಂದೀಪ್ ನನ್ನು ಖುಲಾಸೆಗೊಳಿಸಬೇಕು ಎಂಬ ಪ್ರತಿವಾದವನ್ನು ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ವಿರೋಧಿಸಿತು. ಆರೋಪಿಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ, ತಾಲೂಕು ಆಸ್ಪತ್ರೆಯ ಡ್ರೆಸ್ಸಿಂಗ್ ರೂಮ್‍ನಲ್ಲಿ ಗಲಾಟೆ ಸೃಷ್ಟಿಸಿ ಸಂತ್ರಸ್ತರಿಗೆ ಹಲವು ಬಾರಿ ಚಾಕುವಿನಿಂದ ಇರಿದಿರುವುದು ಆರೋಪಿಯ ಕ್ರೌರ್ಯ ಬಯಲಾಗಿದೆ ಎಂದು ಪ್ರಾಸಿಕ್ಯೂಷನ್ ಸೂಚಿಸಿದೆ. ವಂದನಾಳನ್ನು ಬಲವಂತವಾಗಿ ಹಿಡಿದುಕೊಂಡು ಆಕೆಯನ್ನು ಕೊಲ್ಲುವ ಉದ್ದೇಶದಿಂದ ಎದೆ ಮತ್ತು ಮುಖ ಇತ್ಯಾದಿಗಳಿಗೆ ಪದೇ ಪದೇ ಇರಿದಿದ್ದ. ಪ್ರಾಸಿಕ್ಯೂಷನ್ ಪರವಾಗಿ ಪ್ರತಾಪ್ ಜಿ ಪಾಟಿಕಲ್ ಹಾಜರಾಗಿದ್ದಾರೆ.