ನವದೆಹಲಿ: ರಾಷ್ಟ್ರ ರಾಜಧಾನಿಯ 20 ಆಸ್ಪತ್ರೆಗಳು, ವಿಮಾನ ನಿಲ್ದಾಣ, ಉತ್ತರ ವಲಯ ರೈಲ್ವೆಗೆ ಬೆದರಿಕೆ ಇ-ಮೇಲ್ ಬಂದ ಎರಡು ದಿನಗಳ ಬಳಿಕ, ಏಳು ಆಸ್ಪತ್ರೆ ಮತ್ತು ತಿಹಾರ್ ಜೈಲಿಗೆ ಅದೇ ಮಾದರಿಯ ಬೆದರಿಕೆಯ ಸಂದೇಶ ಮಂಗಳವಾರ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

courtisgod123@beeble.com ನಿಂದ ಈ ಸಂದೇಶ ಕಳುಹಿಸಲಾಗಿದೆ.
'ದೀಪ್ ಚಂದ್ ಬಂಧು ಆಸ್ಪತ್ರೆ, ಅಶೋಕ್ ವಿಹಾರ್, ದಾದಾ ದೇವ್ ಆಸ್ಪತ್ರೆ, ಹೆಡಗೆವಾರ್ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಅತ್ತಾರ್ ಸೈನ್ ಜೈನ್ ಆಸ್ಪತ್ರೆ, ಚಾಚಾ ನೆಹರು ಆಸ್ಪತ್ರೆಗೆ ಇಂಥ ಬೆದಿರಿಕೆಯ ಇ-ಮೇಲ್ ಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ಸ್ಥಳ ಪರಿಶೀಲನೆ ನಡೆಸಿದರು. ಆದರೆ ಬಾಂಬ್ ಪತ್ತೆಯಾಗಿಲ್ಲ. ಇದೊಂದು ಹುಸಿ ಇ-ಮೇಲ್ ಎಂದಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.
'ನಂತರ ತಿಹಾರ್ ಜೈಲಿನಲ್ಲೂ ಬಾಂಬ್ ಶೋಧ ಕಾರ್ಯ ನಡೆಯಿತು. ಅಲ್ಲಿಯೂ ಏನೂ ಪತ್ತೆಯಾಗಿಲ್ಲ. ಎರಡೆರಡು ಬಾರಿ ತಪಾಸಣೆ ಶೋಧ ನಡೆಸಲಾಯಿತು. ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ' ಎಂದಿದ್ದಾರೆ.
ಶೋಧ ಕಾರ್ಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ತುರ್ತು ಚಿಕಿತ್ಸೆಗಳನ್ನು ಮುಂದುವರಿಸಲಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.