ಕೋಲ್ಕತ್ತ (ಪಿಟಿಐ/ರಾಯಿಟರ್ಸ್): ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ 'ರೀಮಲ್' ಚಂಡಮಾರುತವು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶ ಹಾಗೂ ನೆರೆಯ ಬಾಂಗ್ಲಾ ದೇಶದಲ್ಲಿ ಭಾರಿ ಹಾನಿ ಉಂಟು ಮಾಡಿದೆ. 16 ಮಂದಿ ಮೃತಪಟ್ಟಿದ್ದಾರೆ. 'ಪಶ್ಚಿಮ ಬಂಗಾಳದಲ್ಲಿ ಆರು ಮಂದಿ ಸತ್ತಿದ್ದಾರೆ.

ನೆರೆಯ ಬಾಂಗ್ಲಾದಲ್ಲಿ 10 ಮಂದಿ ಸತ್ತಿದ್ದಾರೆ. ಅಲ್ಲಿನ ಕರಾವಳಿ ಭಾಗದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸುಮಾರು 15 ಲಕ್ಷ ಜನರಿಗೆ ಸಮಸ್ಯೆಯಾಗಿದೆ ಎಂದು ಆ ದೇಶದ ಪ್ರಾಕೃತಿಕ ವಿಕೋಪ ನಿರ್ವಹಣಾ ಮುಖ್ಯಸ್ಥ ಮಿಜಾನುರ್ ರೆಹಮಾನ್ ತಿಳಿಸಿದ್ದಾರೆ.
24 ಬ್ಲಾಕ್‌ಗಳಲ್ಲಿ ಪರಿಣಾಮ: ಪಶ್ಚಿಮ ಬಂಗಾಳದಲ್ಲಿ 'ರೀಮಲ್' ಪರಿಣಾಮವು 24 ಬ್ಲಾಕ್‌ಗಳಲ್ಲಿ ಕಾಣಿಸಿಕೊಂಡಿದೆ. ಪ್ರಾಥಮಿಕ ವರದಿಗಳ ಪ್ರಕಾರ, 2,140 ಮರಗಳು, 337 ವಿದ್ಯುತ್ ಕಂಬಗಳು ಉರುಳಿವೆ. 14,941 ಮನೆಗಳು ಜಖಂಗೊಂಡಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಪೈಕಿ ಒಟ್ಟು 1,003 ಮನೆಗಳು ಪೂರ್ಣವಾಗಿ ನಾಶವಾಗಿವೆ. ನಷ್ಟದ ಅಂದಾಜು ಹಾಗೂ ರಕ್ಷಣಾ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ. ಹಾನಿ ಪ್ರಮಾಣ ಏರಿಕೆಯಾಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮುಂಜಾಗ್ರತೆಯಾಗಿ 2.07 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. 1,438 ನಿರಾಶ್ರಿತ ಶಿಬಿರಗಳಲ್ಲಿ 77,288 ಜನರು ಸದ್ಯ ಆಶ್ರಯ ಪಡೆದಿದ್ದಾರೆ. ನಿವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾಕ್ಡ್‌ವಿಪ್, ನಮ್ಖಾನಾ, ಸಾಗರ್ದ್ ದ್ವೀಪ, ಡೈಮಂಡ್ ಹಾರ್ಬರ್, ಫ್ರಸೇರ್‌ಗಂಜ್, ಬಖ್ಖಾಲಿ, ಮಂದಾರ್‌ಮನಿ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಾಗಿದೆ. ಭಾರಿ ಮಳೆ, ಗಾಳಿಯಿಂದ ಮನೆಗಳಿಗೆ ಹಾನಿ ಜೊತೆಗೆ ಮೂಲಸೌಲಭ್ಯಗಳು ಹಾಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.