ಕನ್ಯಾಕುಮಾರಿ : ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಗುರುವಾರ (ಜೂನ್ 31ರಂದು) ಧ್ಯಾನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆ ಸೇರಿದಂತೆ ಸಕಲ ಸಿದ್ಧತೆ ನಡೆಸಲಾಗಿದೆ. ಕನ್ಯಾಕುಮಾರಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.
ಕನ್ಯಾಕುಮಾರಿ : ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಗುರುವಾರ (ಜೂನ್ 31ರಂದು) ಧ್ಯಾನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆ ಸೇರಿದಂತೆ ಸಕಲ ಸಿದ್ಧತೆ ನಡೆಸಲಾಗಿದೆ. ಕನ್ಯಾಕುಮಾರಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.
ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೇ ಹಂತದ ಮತದಾನದ ಜೂನ್ 1ರಂದು ನಡೆಯಲಿದೆ. ಮೋದಿ ಅವರು ಮೇ 30ರ ಸಂಜೆಯಿಂದ ಜೂನ್ 1ರ ಸಂಜೆಯವರೆಗೆ ಸ್ಮಾರಕದ 'ಧ್ಯಾನ ಮಂಟಪಂ'ನಲ್ಲಿ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದರೂ ಅದೇ ಸ್ಥಳದಲ್ಲಿ ಧ್ಯಾನ ಮಾಡಿದ್ದರು. ಈ ಸ್ಥಳವು ತಮಿಳಿನ ಸಂತ ಕವಿ ತಿರುವಳ್ಳುವರ್ ಪ್ರತಿಮೆ ಸನಿಹದಲ್ಲಿದೆ.
ತಿರುನಲ್ವೇಲಿ ವಲಯದ ಡಿಐಜಿ ಪ್ರವೇಶ್ ಕುಮಾರ್ ಹಾಗೂ ಕನ್ಯಾಕುಮಾರಿ ಎಸ್‌ಪಿ ಇ. ಸುಂದರವದನಂ ಅವರು ಸ್ಮಾರಕ, ಬೋಟ್‌ಗಳು ನಿಲ್ಲುವ ಸ್ಥಳ, ಹೆಲಿಪ್ಯಾಡ್ ಹಾಗೂ ಅತಿಥಿ ಗೃಹದಲ್ಲಿ ಭದ್ರತಾ ತಪಾಸಣೆ ನಡೆಸಿದ್ದಾರೆ. ಪ್ರಧಾನಿಯವರ ಭದ್ರತಾ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮೇ 30ರಂದು ಕನ್ಯಾಕುಮಾರಿಗೆ
ಮೋದಿ ಅವರು ಮೇ 30ರಂದೇ ಕನ್ಯಾಕುಮಾರಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಬಳಿಕ ಅವರು ಸ್ಮಾರಕಕ್ಕೆ ತೆರಳಲಿದ್ದಾರೆ. ಜೂನ್ 1ರ ಮಧ್ಯಾಹ್ನ 3ರ ವರೆಗೆ ಅಲ್ಲಿಯೇ ಉಳಿಯಲಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಅವರು 45 ನಿಮಿಷ ಧ್ಯಾನ ಮಾಡಲಿದ್ದು, ಕರಾವಳಿ ಭದ್ರತಾ ಪಡೆ, ಭಾರತೀಯ ಕರಾವಳಿ ಕಾವಲುಪಡೆ ಮತ್ತು ನೌಕಾಪಡೆ ಸಾಗರ ಗಡಿಯಲ್ಲಿ ಕಣ್ಗಾವಲು ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.
2019ರ ಮೇನಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಮೋದಿ ಅವರು ಕೇದಾರನಾಥಕ್ಕೆ ಭೇಟಿ ನೀಡಿ, ರುದ್ರ ಗುಹೆಯಲ್ಲಿ ಧ್ಯಾನ ನಡೆಸಿದ್ದರು. 2014ರ ಚುನಾವಣೆ ಬಳಿಕ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. ಛತ್ರಪತಿ ಶಿವಾಜಿ ಮಹಾರಾಜ್ ಅವರು ಅಫ್ಜಲ್ ಖಾನ್ ವಿರುದ್ಧದ ಕಾಳಗದಲ್ಲಿ ಜಯಶಾಲಿಯಾಗಿದ್ದ ಸ್ಥಳ ಇದು.