ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿ ವಾಹಿನಿಯ ನೇತೃತ್ವದಲ್ಲಿ 3 ದಿನಗಳ ಜೀವನಬೋಧೆ ಶಿಬಿರ 2024 ಶುಕ್ರವಾರ ಸಂಜೆ ಆರಂಭವಾಯಿತು. ನೀರ್ಚಾಲು ಪುದುಕೋಳಿಯಲ್ಲಿರುವ `ಶ್ರೀಸದನ'ದಲ್ಲಿ ಧ್ವಜಾರೋಹಣ, ಗುರುವಂದನೆಯೊಂದಿಗೆ ಶಿಬಿರ ಆರಂಭವಾಯಿತು. ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ ಪೆರಡಾಲ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಜೀವನವನ್ನು ಶಿಸ್ತಿನಿಂದ ಕೊಂಡೊಯ್ಯಲು ಸಾಧ್ಯವಾದ ವ್ಯಕ್ತಿ ಜೀವನದಲ್ಲಿ ಗೆಲುವನ್ನು ಸಾಸಲು ಸಾಧ್ಯವಿದೆ. ಇಂತಹ ಶಿಬಿರಗಳು ಜೀವನಕ್ಕೆ ಪಾಠವಾಗಿದೆ. ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಗೊಂದು ವೇದಿಕೆಯಾಗುವುದಲ್ಲದೆ ಇತರರಿಂದ ಅದೆಷ್ಟೋ ಕಲಿಯಲು ಅವಕಾಶವಿದೆ ಎಂದರು.
ಧರಣಿ ಸರಳಿ ಹಾಡಿದ ಶಿಬಿರಗೀತೆಯ ಗಾಯನಕ್ಕೆ ಪೂರಕವಾಗಿ ಶ್ರೀಲಕ್ಷ್ಮೀ ಕುಳೂರು ಚಿತ್ರ ರಚನೆಯಲ್ಲಿ ಜೊತೆಗೂಡಿದರು. ಡಾ.ವೈ.ವಿ.ಕೃಷ್ಣಮೂರ್ತಿ, ವಿದ್ಯಾರ್ಥಿವಾಹಿನಿಯ ಶ್ಯಾಮಪ್ರಸಾದ ಕುಳಮರ್ವ, ಯುವವಿಭಾಗದ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ, ನವನೀತಪ್ರಿಯ ಕೈಪ್ಪಂಗಳ, ಕೇಶವಪ್ರಸಾದ ಎಡೆಕ್ಕಾನ, ಸರಳಿ ಮಹೇಶ, ಶ್ಯಾಮಪಕೃಷ್ಣ ಪ್ರಕಾಶ ಮುಂಡೋಳುಮೂಲೆ, ಹರಿಪ್ರಸಾದ ಪೆರ್ಮುಖ, ದೀಪಶ್ರೀ ದೊಡ್ಡಮಾಣಿ, ಈಶ್ವರ ಬದಿಯಡ್ಕ ಮೊದಲಾದವರು ಸಹಕರಿಸಿದರು. ಒಟ್ಟು 54 ಮಂದಿ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು. ಶ್ರೀಸದನದ ಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಹಾಗೂ ಶೈಲಜಾ ದಂಪತಿಗಳನ್ನು ಶಾಲು ಹೊದೆಸಿ ಗೌರವಿಸಲಾಯಿತು.