ಭುವನೇಶ್ವರ: 'ಪುರಿ ಜಗನ್ನಾಥ ದೇವರು ಮೋದಿ ಭಕ್ತ' ಹೇಳಿಕೆ ಕುರಿತಂತೆ ದೇವರಲ್ಲಿ ಕ್ಷಮೆಯಾಚಿಸಿರುವ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ, ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮುಂದಿನ ಮೂರು ದಿನಗಳ ಕಾಲ ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿರುವ ವೇಳೆ, 'ಪುರಿ ಜಗನ್ನಾಥ ದೇವರು ಮೋದಿ ಭಕ್ತ' ಎಂದು ಸಂಬಿತ್ ಹೇಳಿಕೆ ನೀಡಿದ್ದರು. ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಲೇ ಬಾಯಿತಪ್ಪಿ ಹೇಳಿದ್ದಾಗಿ ಸಮಜಾಯಿಷಿ ನೀಡಿದ್ದರು.
ಈ ಕುರಿತಂತೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, 'ಮಾಡಿದ ತಪ್ಪಿಗಾಗಿ ನಾನು ಜಗನ್ನಾಥನ ಪಾದಕ್ಕೆರಗಿ ಕ್ಷಮೆಯಾಚಿಸುತ್ತೇನೆ. ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮುಂದಿನ ಮೂರು ದಿನ ಉಪವಾಸ ಇರಲಿದ್ದೇನೆ' ಎಂದರು.
ಸಂಬಿತ್ ಪಾತ್ರಾ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಸಂಬಿತ್ ಪಾತ್ರಾ ಹೇಳಿಕೆ ವ್ಯಾಪಕ ಟ್ರೋಲ್ ಕೂಡ ಆಗಿತ್ತು.