ಚೆನ್ನೈ: ಕೇರಳದ ತ್ಯಾಜ್ಯ ನಿರ್ವಹಣೆಯನ್ನು ಕೇಂದ್ರ ಟೀಕಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವರದಿ ಪ್ರಕಾರ ತ್ಯಾಜ್ಯ ನಿರ್ವಹಣೆ ಯೋಜನೆಗಳಲ್ಲಿ ಗಂಭೀರ ಲೋಪಗಳು ಕಂಡುಬಂದಿದೆ. ವರದಿಯ ಪ್ರಕಾರ, ಘನತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಆಸ್ಪತ್ರೆಯ ತ್ಯಾಜ್ಯವನ್ನು ಸಂಗ್ರಹಿಸುವುದು ಮತ್ತು ರಾಜ್ಯದ ಗಡಿ ಪ್ರದೇಶಗÀಳಲ್ಲಿ ತ್ಯಾಜ್ಯವನ್ನು ಎಸೆಯುವುದು ಪ್ರಧಾನ ಲೋಪಗಳಾಗಿವೆ.
ಕೇರಳ ಮತ್ತು ತಮಿಳುನಾಡು, ಕೇರಳ-ಕರ್ನಾಟಕ ಗಡಿ ಪ್ರದೇಶಗಳ ತ್ಯಾಜ್ಯ ನಿರ್ವಹಣಾ ಕೇಂದ್ರಗಳನ್ನು ಪರಿಶೀಲಿಸಿದ ನಂತರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಸಿಪಿಸಿಬಿ ಕೇರಳವನ್ನು ದೂಷಿಸಿದೆ. ಕೇರಳದಿಂದ ಖಾಸಗಿ ಗುತ್ತಿಗೆದಾರರು ತಮಿಳುನಾಡು ಹಾಗೂ ಕರ್ನಾಟಕ ಗಡಿ ಗ್ರಾಮಗಳಲ್ಲಿ ತ್ಯಾಜ್ಯ ಸುರಿಯುತ್ತಿರುವ ವರದಿಗಳ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಹಸಿರು ನ್ಯಾಯಮಂಡಳಿಯ ಶಿಫಾರಸಿನ ಮೇರೆಗೆ ಸಿಪಿಸಿಬಿ ಈ ವರದಿ ಸಲ್ಲಿಸಿದೆ.
ಕೇರಳದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯದಲ್ಲಿ ಶೇ 30ರಷ್ಟು ಮಾತ್ರ ಸಂಗ್ರಹವಾಗುತ್ತದೆ. ತ್ಯಾಜ್ಯ ನಿರ್ವಹಣಾ ಕಾರ್ಯಾಚರಣೆಯನ್ನು ಸರಳೀಕರಿಸಲು ಕೇರಳ ಸರ್ಕಾರ ರಚಿಸಿರುವ ಕ್ಲೀನ್ ಕೇರಳ ಕಂಪನಿ ಲಿಮಿಟೆಡ್‍ನ ಚಟುವಟಿಕೆಗಳಲ್ಲಿ ಲೋಪಗಳಿವೆ ಎಂದು ವರದಿ ಹೇಳಿದೆ.
ಗಡಿಯಾಚೆಗಿನ ತ್ಯಾಜ್ಯ ವಿಲೇವಾರಿ ಮೇಲೆ ನಿಗಾ ಇಡಲು ಕೇರಳ ಮತ್ತು ತಮಿಳುನಾಡು ರಾಜ್ಯಗಳು ರಚಿಸಿರುವ ಕಾರ್ಯಪಡೆಯ ಕಾರ್ಯವೂ ತೃಪ್ತಿಕರವಾಗಿಲ್ಲ. ಈ ಸಮಸ್ಯೆಗಳ ಬಗ್ಗೆ ವಿಸ್ತೃತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿದ್ಧವಾಗಬೇಕು ಎಂದು ವರದಿ ಹೇಳುತ್ತದೆ. ತ್ಯಾಜ್ಯ ನಿರ್ವಹಣೆಗೆ ಗ್ರೀನ್ ಟಾಸ್ಕ್ ಪೋರ್ಸ್ ಅನ್ನು ಸೇರಿಸಲಾಗಿದೆ ಎಂದು ಸಿಪಿಸಿಬಿ ವರದಿ ತೋರಿಸುತ್ತದೆ, ಆದರೆ ಅದು ಪರಿಣಾಮಕಾರಿಯಾಗಿಲ್ಲ.