ಬೆಂಗಳೂರು: ಬೆಂಗಳೂರು ಕೋರಮಂಗಲದ ಶ್ರೀ ಎಡನೀರು ಮಠ ಶ್ರೀ ಕೃಷ್ಣ ದೇವಾಲಯದ 30 ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮೇ 11 ಮತ್ತು 12 ರಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿ ಹಾಗು ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ತಾಂತ್ರಿಕತ್ವ ಮತ್ತು ಮಾರ್ಗದರ್ಶನದಲ್ಲಿ ಆರಂಭಗೊಂಡಿದೆ.
ಮೇ 11 ರಂದು ಬೆಳಿಗ್ಗೆ 7 ರಿಂದ ಗಣಹೋಮ, ಪಂಚಗವ್ಯ, ಪುಣ್ಯಾಹ ಶುದ್ಧಿ, ನವಕ ಪ್ರಧಾನ ಕಲಶ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, 108 ನಾಳಿಕೇರ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಮಧಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6 ರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.
ಇಂದು(ಮೇ 12) ಬೆಳಿಗ್ಗೆ 7 ರಿಂದ ಗಣಹೋಮ, ಚಕ್ರಾಬ್ಜ ಪೂಜೆ, ಪಂಚಾಮೃತಾಭಿಷೇಕ, ನಾಳಿಕೇರ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 6.30 ರಿಂದ ವಿಶೇಷ ಅಲಂಕಾರ ಪೂಜೆ, ಪುಷ್ಪ ರಥೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.