ಬದಿಯಡ್ಕ: ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 26ನೇ ವರ್ಷದ ಕೊನೆಯ ಸೇವೆಯಾಟ ಹಾಗೂ ಬ್ರಹ್ಮಶ್ರೀ ತಂತ್ರಿ, ತಂತ್ರವಿದ್ಯಾತಿಲಕ ದಿ.ಅನಂತ ಪದ್ಮನಾಭ ಉಪಾಧ್ಯಾಯರ 20ನೇ ಸಂಸ್ಮರಣಾ ಸಮಾರಂಭ ಮೇ. 30 ರಂದು ಗುರುವಾರದಿಂದ ಜೂ.1 ರ ಶನಿವಾರದವರೆಗೆ ಶ್ರೀ ಕ್ಷೇತ್ರ ಕೊಲ್ಲಂಗಾನದಲ್ಲಿ ಪ್ರತಿ ದಿನ ಸಂಜೆ 7 ರಿಂದ 11ರ ವರೆಗೆ ನಡೆಯಲಿದೆ.
ಮೇ.30 ರಂದು ಚಕ್ರವರ್ತಿ ದಶರಥ, 31 ರಂದು ಮೀನಾಕ್ಷಿ ಕಲ್ಯಾಣ ಹಾಗೂ ಜೂ. 1 ರಂದು ಶನಿವಾರ ರಾತ್ರಿ 9.ರಿಂದ ಬಸವರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಯಕ್ಷಗುರು ರವಿ ಅಲೆವೂರಾಯ ವರ್ಕಾಡಿ ವಿರಚಿತ ‘ವೀರಶತಕಂಠ’ ಪ್ರಸಂಗ ಪುಸ್ತಕ ಬಿಡುಗಡೆ ನಡೆಯಲಿದೆ. ಬಳಿಕ ರಾತ್ರಿ 10 ರಿಂದ ವೀರಶತಕಂಠ- ಗಿರಿಜಾ ಕಲ್ಯಾಣ ಯಕ್ಷಗಾನ ಬಯಲಾಟ ಪೂರ್ಣ ರಾತ್ರಿ ನಡೆಯಲಿದೆ. ಕಲಾಪ್ರೇಮಿಗಳು ಸಮಾರಂಭಗಳನ್ನು ಯಶಸ್ಸಿಗೊಳಿಸಬೇಕೆಂದು ಮೇಳದ ವ್ಯವಸ್ಥಾಪಕ ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.