ತಿರುವನಂತಪುರಂ: ಜಲಜೀವನ ಯೋಜನೆಯ ಅನುಷ್ಠಾನದಲ್ಲಿ ಕೇರಳ 31ನೇ ಸ್ಥಾನದಲ್ಲಿದೆ ಎಂದು ಮಾಹಿತಿ ಹಕ್ಕು ದಾಖಲೆಯಲ್ಲಿ ತಿಳಿಸಿದೆ. ಕೇರಳ ಸರ್ಕಾರಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ವರ್ಗೀಸ್ ಕನ್ನಂಬಿಳ್ಳಿ ಸಲ್ಲಿಸಿರುವ ಆರ್ ಟಿಐ ಅರ್ಜಿಯಲ್ಲಿ ಇದು ಸ್ಪಷ್ಟವಾಗಿದೆ.
ಜಲಜೀವನ್ ಯೋಜನೆಯನ್ನು ಕಳೆದ ಮಾರ್ಚ್‍ನಲ್ಲಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸೂಚಿಸಿತ್ತು. ಆರ್‍ಟಿಐ ದಾಖಲೆಯ ಪ್ರಕಾರ, ಅವಧಿ ಮುಗಿದ ನಂತರ ರಾಜ್ಯವು ಒಂದು ವರ್ಷ ವಿಸ್ತರಣೆಯನ್ನು ಕೋರಿದೆ.
44714 ಕೋಟಿಗಳ ಯೋಜನೆಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿದೆ. ಯೋಜನೆಯನ್ನು ಪೂರ್ಣಗೊಳಿಸಲು 35810 ಕೋಟಿ ರೂಪಾಯಿಗಳ ಅಗತ್ಯವಿದೆ. ರಾಜ್ಯದಲ್ಲಿ ಇದುವರೆಗೆ 8813 ಕೋಟಿ ರೂ.ವೆಚ್ಚಮಾಡಲಾಗಿದೆ. ಸ್ಥಳೀಯಾಡಳಿತ ಸಂಸ್ಥೆ ಪಾಲು ಹಾಗೂ ಗ್ರಾಹಕರ ಪಾಲು ಖರ್ಚಾಗಿಲ್ಲ ಎಂದು ಜಲಜೀವನ್ ಸಾರ್ವಜನಿಕ ಮಾಹಿತಿ ಅಧಿಕಾರಿ ಉತ್ತರದಲ್ಲಿ ತಿಳಿಸಿದ್ದಾರೆ. ಯೋಜನಾ ವೆಚ್ಚದ 50 ಶೇ. ಕೇಂದ್ರ, 25 ಶೇ. ರಾಜ್ಯ, 15 ಶೇ. ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು 10 ಶೇ.ಫಲಾನುಭವಿಗಳು ಭರಿಸಬೇಕಾಗುತ್ತದೆ.