HEALTH TIPS

ಜಿಲ್ಲೆಯ 3598 ಶಿಕ್ಷಕರಿಗೆ ಕೈಟ್ ಎ.ಐ ಪ್ರಾಯೋಗಿಕ ತರಬೇತಿ ಪ್ರಾರಂಭ

              ಕಾಸರಗೋಡು: ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸಾಮಥ್ರ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಟ್  ವತಿಯಿಂದ ಮೂರು ದಿನಗಳ ಪ್ರಾಯೋಗಿಕ ತರಬೇತಿಯನ್ನು ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ. 

            ಎಂಟರಿಂದ ಹನ್ನೆರಡನೇ ತರಗತಿವರೆಗೆ ಬೋಧಿಸುವ 3598 ಶಿಕ್ಷಕರಿಗೆ ಆಗಸ್ಟ್ ವರೆಗೆ ತರಬೇತಿ ನೀಡಲಾಗುವುದು. ಲ್ಯಾಪ್‍ಟಾಪ್ ಮತ್ತು ಸ್ಮಾರ್ಟ್ ಪೋನ್‍ಗಳನ್ನು ಬಳಸಿಕೊಂಡು 25 ವಿದ್ಯಾರ್ಥಿಗಳ ವಿವಿಧ ಬ್ಯಾಚ್‍ಗಳಲ್ಲಿ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸುತ್ತಾರೆ. ಎ.ಐ. ಉಪಕರಣಗಳನ್ನು ಬಳಸುವಾಗ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಟ್ ಒದಗಿಸಿದ ಜಿ-ಸ್ಯೂಟ್ ಖಾತೆಗಳನ್ನು ಬಳಸಲಾಗುತ್ತದೆ. ಪ್ರತಿ ಮಗುವಿಗೆ ಅನುಗುಣವಾಗಿ ಕಲಿಕೆಯ ಚಟುವಟಿಕೆಗಳನ್ನು ಯೋಜಿಸಲು ಸಂಪನ್ಮೂಲಗಳನ್ನು ವಿಶೇಷ ಚೇತನ ಸ್ನೇಹಿ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ತರಬೇತಿ ಮೂಲಕ ಶಿಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries