ವಾಷಿಂಗ್ಟನ್: ಭಾರತ ಸಂಜಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಮಂಗಳವಾರ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.
3ನೇ ಬಾರಿಗೆ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ ಭಾರತ ಮೂಲದ ಸುನಿತಾ ವಿಲಿಯಮ್ಸ್
0
ಮೇ 06, 2024
Tags
ವಾಷಿಂಗ್ಟನ್: ಭಾರತ ಸಂಜಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಮಂಗಳವಾರ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.
ಗಗನಯಾತ್ರಿಯನ್ನು ಒಳಗೊಂಡ ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಮೂಲಕ ಅವರು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.
58 ವರ್ಷದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಹೊತ್ತು ಸ್ಟಾರ್‌ಲೈನರ್ ನೌಕೆ ಗಗನಕ್ಕೆ ಚಿಮ್ಮಲಿದೆ.
ಬೋಯಿಂಗ್ ಸಂಸ್ಥೆಯ ಬಹುದಿನಗಳ ಕಾಯುವಿಕೆಯು ನಾಳೆ ಅಂತ್ಯವಾಗಲಿದೆ.
ಅಮೆರಿಕದ ಸ್ಥಳೀಯ ಕಾಲಮಾನ ಸೋಮವಾರ ರಾತ್ರಿ 22.34(ಐಎಸ್‌ಟಿ ಮಂಗಳವಾರ ಬೆಳಿಗ್ಗೆ 8:04) ಸ್ಟಾರ್‌ಲೈನರ್ ನೌಕೆ ಉಡ್ಡಯನ ಆಗಲಿದೆ.
'ನಾವೆಲ್ಲರೂ ಸಂಪೂರ್ಣ ಸಿದ್ಧವಾಗಿದ್ದೇವೆ. ನಮ್ಮ ಕುಟುಂಬ ಮತ್ತು ಗೆಳೆಯರಿಗೂ ಇದರ ಬಗ್ಗೆ ತಿಳಿದಿದೆ. ನಾವು ಈ ಬಗ್ಗೆ ಅವರ ಜೊತೆ ಮಾತನಾಡಿದ್ದೇವೆ. ಅವರು ಖುಷಿ ಮತ್ತು ಹೆಮ್ಮೆಯಿಂದಿದ್ದಾರೆ. ನಾನು ಈ ಯಾತ್ರೆಯ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ' ಎಂದು ಸುನಿತಾ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.