HEALTH TIPS

ಏಷ್ಯನ್ನರು ಕಳೊಕೊಂಡದ್ದು 3 ವರ್ಷಗಳನ್ನು: ಜೀವಿತಾವಧಿಯನ್ನು ಕಡಮೆ ಮಾಡಿದ ಕೋವಿಡ್: ಮಾನವನ ಜೀವಿತಾವಧಿ ಒಂದು ದಶಕದ ಕಡಿತ: ವರದಿ

             ಜಿನೀವಾ: ಜಾಗತಿಕ ಜೀವಿತಾವಧಿ ಒಂದು ದಶಕದಲ್ಲೇ ಅತ್ಯಂತ ಕಡಮೆ ಮಟ್ಟದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಪ್ರಸ್ತುತ ಸರಾಸರಿ ಜೀವಿತಾವಧಿ 71.4 ವರ್ಷಗಳು ಎಂದು ವರದಿಯು ಗಮನಸೆಳೆದಿದೆ.

             2019 ಮತ್ತು 2021 ರ ನಡುವೆ, ಮಾನವ ಜೀವಿತಾವಧಿಯು 1.8 ವರ್ಷಗಳಷ್ಟು ಕಡಮೆಯಾಗಿದೆ. ಅದೇ ರೀತಿ ಆರೋಗ್ಯಕರ ಜೀವಿತಾವಧಿಯು 1.5 ವರ್ಷದಿಂದ 61.9 ವರ್ಷಗಳಿಗೆ ಕುಸಿದಿದೆ. ಅಮೆರಿಕ ಮತ್ತು ಆಗ್ನೇಯ ಏಷ್ಯಾಗಳ ಮೇಲೆ ಹೆಚ್ಚು ಪರಿಣಾಮ ಬೀರಿತು. ಎರಡೂ ಖಂಡಗಳಲ್ಲಿ ಜೀವಿತಾವಧಿ ಸುಮಾರು 3 ವರ್ಷಗಳು ಕುಸಿಯಿತು.

          ಡಬ್ಲ್ಯು.ಎಚ್.ಒ. ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಕೋವಿಡ್ -19 ಸಾಂಕ್ರಾಮಿಕವು ಒಂದು ದಶಕದ ಆರೋಗ್ಯ ಲಾಭವನ್ನು ಅಳಿಸಿಹಾಕಿದೆ ಎಂದು ಹೇಳಿದರು. ಕೋವಿಡ್‍ನಿಂದಾಗಿ 1.3 ಕೋಟಿಗೂ ಹೆಚ್ಚು ಜೀವಗಳನ್ನು ಕಳೆದುಕೊಂಡಿದ್ದಾರೆ ಎಂದು ಅವರು ಗಮನಸೆಳೆದಿದ್ದಾರೆ.

            ವರದಿಯ ಪ್ರಕಾರ, 2019 ರ ಮೊದಲು ಶೇಕಡಾ 74 ರಷ್ಟು ಸಾವುಗಳು ಪಾಶ್ರ್ವವಾಯು, ಕ್ಯಾನ್ಸರ್, ದೀರ್ಘಕಾಲದ ಉಸಿರಾಟದ ಕಾಯಿಲೆಗಳು, ಆಲ್ಝೈಮರ್ ಮತ್ತು ಮಧುಮೇಹದಿಂದ ಸಂಭವಿಸಿವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries