ಜೈಪುರ: ರಾಜಸ್ಥಾನದಲ್ಲಿ ಬಿಸಿಳ ಝಳ ಹೆಚ್ಚಾಗಿದ್ದು ಮುಂದಿನ ಮೂರು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಗುರುವಾರ ಬಾರ್ಮೇರ್ ಜಿಲ್ಲೆಯಲ್ಲಿ ಗರಿಷ್ಠ 48.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಜೈಪುರ: ರಾಜಸ್ಥಾನದಲ್ಲಿ ಬಿಸಿಳ ಝಳ ಹೆಚ್ಚಾಗಿದ್ದು ಮುಂದಿನ ಮೂರು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಗುರುವಾರ ಬಾರ್ಮೇರ್ ಜಿಲ್ಲೆಯಲ್ಲಿ ಗರಿಷ್ಠ 48.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಜಸ್ಥಾನದ ಹವಾಮಾನದ ಕುರಿತು ಮಾಹಿತಿ ನೀಡಿರುವ ಐಎಂಡಿಯ ವಿಜ್ಞಾನಿ ನರೇಶ್ ಕುಮಾರ್, 'ರಾಜಸ್ಥಾನ, ಹರಿಯಾಣದಲ್ಲಿ ರೆಡ್ ಅಲರ್ಟ್ ಮತ್ತು ಪಂಜಾಬ್‌ನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಕಳೆದ ಎರಡು ದಿನಗಳಲ್ಲಿ ತಾಪಮಾನ ತುಸು ಕುಸಿತ ಕಂಡಿದೆ. ಆದರೂ ಕೆಲವು ದಿನ 43-44 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಅಂದಾಜಿಸಿದ್ದೇವೆ. ಹೀಗಾಗಿ ಜನರು ಎಚ್ಚರಿಕೆವಹಿಸಬೇಕು' ಎಂದರು.