ಕಠ್ಮಂಡು: ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪರ್ವತಾರೋಹಿ ಬಚೇಂದ್ರಿ ಪಾಲ್ ಅವರು ಈ ಶಿಖರ ಆರೋಹಣ ಮಾಡಿ 40 ವರ್ಷಗಳು ಪೂರೈಸಿವೆ.
ಕಠ್ಮಂಡು: ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪರ್ವತಾರೋಹಿ ಬಚೇಂದ್ರಿ ಪಾಲ್ ಅವರು ಈ ಶಿಖರ ಆರೋಹಣ ಮಾಡಿ 40 ವರ್ಷಗಳು ಪೂರೈಸಿವೆ.
ಈ ಹಿನ್ನೆಲೆಯಲ್ಲಿ ಪಾಲ್ ಅವರು, ಮೌಂಟ್ ಎವರೆಸ್ಟ್ ಚಾರಣ ಮಾಡಿದ 40ನೇ ವಾರ್ಷಿಕೋತ್ಸವವನ್ನು ಆಚರಿಸಿದರು.
ಪದ್ಮಭೂಷಣ ಪ್ರಶಸ್ತಿ ಪುರಸ್ಕ್ರತರೂ ಆಗಿರುವ ಪಾಲ್ ಅವರು 'ವುಮೆನ್ ಅಡ್ವೆಂಚರ್ ನೆಟ್‌ವರ್ಕ್ ಆಫ್ ಇಂಡಿಯಾ (ಡಬ್ಲುಎಎನ್‌ಐ) ಎಂಬ ಸಂಘಟನೆ ಸ್ಥಾಪಿಸಿದ್ದಾರೆ.
ದಾಖಲೆ: ನೇಪಾಳದ ಪರ್ವತಾರೋಹಿ ಮತ್ತು ಫೋಟೊ ಜರ್ನಲಿಸ್ಟ್ ಆಗಿರುವ ಪೂರ್ಣಿಮಾ ಶ್ರೇಷ್ಠ ಅವರು ಒಂದೇ ಆರೋಹಣ ಋತುವಿನಲ್ಲಿ ಮೂರು ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನು ಆರೋಹಣ ಮಾಡಿದ ಮೊದಲಿಗರು ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಮೇ12ರಂದು ಪೂರ್ಣಿಮಾ ಮೊದಲ ಬಾರಿಗೆ ಶಿಖರವನ್ನು ಏರಿದರು. ಬಳಿಕ ಮೇ 19ರಂದು ಪಸಾಂಗ್ ಶೆರ್ಪಾ ಅವರೊಂದಿಗೆ ಮತ್ತೊಮ್ಮೆ ಶಿಖರವನ್ನು ಏರಿದರು. ಶನಿವಾರ ಮೂರನೇ ಬಾರಿಗೆ ಯಶಸ್ವಿಯಾಗಿ ಶಿಖರವನ್ನು ಏರಿ, ಈ ಸಾಧನೆ ಮಾಡಿದ್ದಾರೆ.
ಪೂರ್ಣಿಮಾ ಒಟ್ಟು 4 ಬಾರಿ ಶಿಖರವನ್ನು ಆರೋಹಣ ಮಾಡಿದ್ದಾರೆ. 2018ರಲ್ಲಿ ಅವರು ಮೊದಲ ಬಾರಿಗೆ ಪರ್ವತ ಏರಿದ್ದರು.