ಪುಣೆ: ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಇಟ್ಟಿಟ್ಟ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್ ಆಫ್ ಆಗಿದ್ದು, ಏನೋ ತಪ್ಪು ನಡೆದಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎಸ್‌ಪಿ) ಸೋಮವಾರ ಆರೋಪಿಸಿದೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭಾರತೀಯ ಆಹಾರ ನಿಗಮದ ಗೋದಾಮೊಂದರಲ್ಲಿ ಇವಿಎಂಗಳನ್ನು ಇರಿಸಲಾಗಿತ್ತು. ವಿದ್ಯುತ್ ಕಾಮಗಾರಿ ನಡೆದ ಕಾರಣದಿಂದಾಗಿ ಕ್ಯಾಮೆರಾದ ಕೇಬಲ್ ತೆಗೆಯಬೇಕಾಯಿತು. ಹೀಗಾಗಿ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಅಲ್ಪಾವಧಿ ಸ್ಥಗಿತಗೊಂಡಿದ್ದವು ಎಂದು ಉಸ್ತುವಾರಿ ವಹಿಸಿದ್ದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬೆಳಿಗ್ಗೆ 10.30ರಿಂದ 11.15ರವರೆಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್ ಆಫ್ ಆಗಿದ್ದವು ಎಂದು, ಬಾರಾಮತಿ ಅಭ್ಯರ್ಥಿ ಸುಪ್ರಿಯಾ ಸುಳೆ ಅವರ ಚುನಾವಣಾ ಪ್ರತಿನಿಧಿಯಾದ ಲಕ್ಷ್ಮೀಕಾಂತ್ ಕೆ. ತಿಳಿಸಿದ್ದಾರೆ.
'ಸಿ.ಸಿ.ಟಿ.ವಿಗಳು ಸ್ವಿಚ್ ಆಫ್ ಆದ ಕುರಿತು ಪೊಲೀಸರ ಗಮನಕ್ಕೆ ತಂದೆವು. ಇಲ್ಲಿ ಇದ್ದವರು ತಾಂತ್ರಿಕ ಕಾರಣದ ಸ್ಪಷ್ಟನೆಯನ್ನು ನೀಡಿದರು. ಆದರೂ ನಾವು ಚುನಾವಣಾಧಿಕಾರಿಗೆ ಈ ಕುರಿತು ತಕರಾರು ಅರ್ಜಿ ಸಲ್ಲಿಸುತ್ತೇವೆ' ಎಂದು ಲಕ್ಷ್ಮೀಕಾಂತ್ ಪ್ರತಿಕ್ರಿಯಿಸಿದ್ದಾರೆ.