ತಿರುವನಂತಪುರಂ: ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಇದುವರೆಗೆ ಸುಮಾರು 497 ಹಾಲು ನೀಡುವ ಹಸುಗಳು ಸಾವನ್ನಪ್ಪಿವೆ ಎಂದು ಪ್ರಾಣಿ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕೊಲ್ಲಂನಲ್ಲಿ ಸುಮಾರು 105 ಹಸುಗಳು ಸಾವನ್ನಪ್ಪಿವೆ.
ಬಿಸಿಲ ತಾಪ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಾನುವಾರುಗಳನ್ನು ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಬಯಲುಗಳಿಗೆ ಮೇಯಲು ಬಿಡದಂತೆ ಪಶು ಸಂರಕ್ಷಣಾ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸಾಕುಪ್ರಾಣಿಗಳ ರಕ್ಷಣೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಸಮಯದಲ್ಲಿ ಹೊಲದಲ್ಲಿ ಹಸುಗಳನ್ನು ಕಟ್ಟಬಾರದು. ಸತ್ತ ಜಾನುವಾರುಗಳ ಪರಿಹಾರವನ್ನು ತಕ್ಷಣವೇ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.