ಕೋಝಿಕ್ಕೋಡ್: ಅಮೀಬಿಕ್ ಎನ್ಸೆಫಾಲಿಟಿಸ್ ಶಂಕೆಯಿಂದ ನಿಗಾದಲ್ಲಿದ್ದ ನಾಲ್ವರು ಮಕ್ಕಳ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿದೆ.
ಎರಡು ದಿನಗಳ ಹಿಂದೆ ಕಾಯಿಲೆ ಪೀಡಿತರಾದ ಮುನ್ನಿಯೂರಿನ ಐದು ವರ್ಷದ ಬಾಲಕಿಯೊಂದಿಗೆ ಕಡಲುಂಡಿ ನದಿಯಲ್ಲಿ ಸ್ನಾನ ಮಾಡಿದ ಮಕ್ಕಳ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿಜe. ಅವರು ರೋಗಲಕ್ಷಣಗಳನ್ನು ಹೊಂದಿದ್ದರು.
ಏತನ್ಮಧ್ಯೆ, ಐದು ವರ್ಷದ ಬಾಲಕಿಯ ಸ್ಥಿತಿಯು ವೆಂಟಿಲೇಟರ್‍ನಲ್ಲಿ ಗಂಭೀರವಾಗಿದೆ. ಮಲಪ್ಪುರಂ ಕಡಲುಂಡಿ ನದಿಯಿಂದ ವೈರಸ್‍ಗೆ ತುತ್ತಾಗಿದೆ ಎಂದು ನಂಬಲಾಗಿದೆ.
ತೀವ್ರ ತಲೆನೋವು ಮತ್ತು ಜ್ವರದಿಂದ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅನಾರೋಗ್ಯವು ಗಂಭೀರವಾದ ಕಾರಣ, ಬೆನ್ನುಹುರಿಯಿಂದ ದ್ರವವನ್ನು ಪರೀಕ್ಷಿಸಿದಾಗ ಅಮೀಬಿಕ್ ಎನ್ಸೆಫಾಲಿಟಿಸ್ ಎಂದು ದೃಢಪಟ್ಟಿತು. ಬಳಿಕ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಮಗು ನದಿಗೆ ಹೋದ ದಿನವೇ ನದಿಯಲ್ಲಿ ಸ್ನಾನ ಮಾಡಿದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದೇ ಜೆಟ್ಟಿಯಲ್ಲಿ ಸ್ನಾನ ಮಾಡಿದವರಿಗೆ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಐದು ವರ್ಷದ ಬಾಲಕಿ ಅಮೀಬಿಕ್ ಮೆದುಳು ಜ್ವರದಿಂದ ಬಳಲುತ್ತಿರುವ ಪ್ರಕರಣದಲ್ಲಿ ಮಲಪ್ಪುರಂನ ಮುನ್ನಿಯೂರಿನಲ್ಲಿ ನದಿಯಲ್ಲಿ ಸ್ನಾನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ಪ್ರದೇಶದ ಐದು ಘಾಟ್‍ಗಳಲ್ಲಿ ಇಳಿಯಲು ಪಂಚಾಯಿತಿ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ.