HEALTH TIPS

ಚಾಟ್​ಜಿಪಿಟಿ-4ಒ ಹಿಂದಿನ ಸೂತ್ರದಾರ ಈ ಭಾರತೀಯ; ಸ್ಯಾಮ್ ಆಲ್ಟ್​ಮ್ಯಾನ್ ಹೆಸರಿಸಿದ ಪ್ರಫುಲ್ಲ ಧರಿವಾಲ ಯಾರು?

 ಸ್ಯಾಮ್ ಆಲ್ಟ್​ಮ್ಯಾನ್ ನೇತೃತ್ವದ ಓಪನ್​ಎಐ ಸಂಸ್ಥೆ ಇತ್ತೀಚೆಗೆ ಜಿಪಿಟಿ-4ಒ ಎಂಬ ಹೊಸ ಎಐ ಮಾಡಲ್ ಬಿಡುಗಡೆ ಮಾಡಿದೆ. ಓಪನ್​ಎಐನ ಓಮ್ನಿ ಟೀಮ್ ಇದನ್ನು ಅಭಿವೃದ್ಧಿಪಡಿಸಿದೆ. ಈ ಓಮ್ನಿ ಟೀಮ್​ನ ಪ್ರಮುಖ ವ್ಯಕ್ತಿ ಭಾರತ ಮೂಲದ ಪ್ರಫುಲ್ಲಾ ಧರಿವಾಲ ಅವರಾಗಿದ್ದಾರೆ.

ಸ್ಯಾಮ್ ಆಲ್ಟ್​ಮ್ಯಾನ್ ಕೂಡ ಪ್ರಫುಲ್ಲಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪ್ರಫುಲ್ಲಾ ಇಲ್ಲದೇ ಹೋಗಿದ್ದರೆ ಜಿಪಿಟಿ 4ಒ ಬಿಡುಗಡೆ ಆಗಲು ಆಗುತ್ತಿರಲಿಲ್ಲ ಎಂದಿದ್ದಾರೆ.

ನವದೆಹಲಿ, ಮೇ 20: ವಿಶ್ವದ ಅಗ್ರಮಾನ್ಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿ ಎನಿಸಿರುವ ಓಪನ್​ಎಐ ಸಂಸ್ಥೆ (OpenAI) ಕೆಲ ವಾರಗಳ ಹಿಂದೆ ಚಾಟ್​ಜಿಪಿಟಿ-4ಒ (GPT- 4o) ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇಲ್ಲಿ ಒ ಎಂದರೆ ಓಪನ್​ಎಐನ ಓಮ್ನಿ ತಂಡ. ಈ ಓಮ್ನಿ ತಂಡದಿಂದ ಚಾಟ್​ಜಿಪಿಟಿ-4ನ ಹೊಸ ಸುಧಾರಿತ ಅವತಾರ (model) ರೂಪಿಸಲಾಗಿದೆ. ಹೀಗಾಗಿ, ಇದಕ್ಕೆ 4ಒ ಎಂದು ಹೆಸರಿಡಲಾಗಿದೆ. ಈ ಓಮ್ನಿ ಟೀಮ್​ನ ಪ್ರಮುಖ ವ್ಯಕ್ತಿಗಳಲ್ಲಿ ಭಾರತ ಮೂಲದ ಪ್ರಫುಲ್ಲಾ ಧರಿವಾಲ್ (Prafulla Dariwal) ಅವರಿದ್ದಾರೆ. ಚಾಟ್​ಜಿಪಿಟಿ-4ಒ ಅನ್ನು ಬಿಡುಗಡೆ ಮಾಡುವ ವೇಳೆ ಸ್ಯಾಮ್ ಆಲ್ಟ್​ಮ್ಯಾನ್ ಅವರು ಪ್ರಫುಲ್ಲಾರ ಹೆಸರು ಪ್ರಸ್ತಾಪಿಸಿದ್ದರು.


ಪ್ರಫುಲ್ಲಾ ಧರಿವಾಲ ಅವರ ಪ್ರತಿಭೆ, ದೃಷ್ಟಿಕೋನ, ಹಾಗೂ ದೀರ್ಘಕಾಲದ ಅವರ ಬದ್ಧತೆ ಇಲ್ಲದೇ ಹೋಗಿದ್ದರೆ ಜಿಪಿಟಿ-4ಒ ಬೆಳಕು ಕಾಣುತ್ತಿರಲಿಲ್ಲ. ನಾವು ಕಂಪ್ಯೂಟರ್ ಅನ್ನು ಬಳಸುವ ರೀತಿಯಲ್ಲೇ ಇದು ಹೊಸ ಕ್ರಾಂತಿ ಸೃಷ್ಟಿಸುತ್ತದೆ ಎಂದು ಸ್ಯಾಮ್ ಆಲ್ಟ್​ಮ್ಯಾನ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

AI ಆತಂಕ ಬೇಡ, ಅರ್ಥ ಮಾಡಿಕೊಳ್ಳಿ: ಭಾರತದ ಯುವ ಟೆಕ್ಕಿಗಳಿಗೆ ಸುಂದರ ಸಲಹೆ ನೀಡಿದ ಪಿಚೈ!

ಪ್ರಫುಲ್ಲಾ ಧರಿವಾಲ್ ಅವರೂ ಜಿಪಿಟಿ 4ಒ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇದು ಓಮ್ನಿ ಟೀಮ್​ನಿಂದ ಹೊರತರಲಾಗಿರುವ ಮೊದಲ ಮಾಡಲ್ ಎಂದಿದ್ದಾರೆ.

ಸ್ಯಾಮ್ ಆಲ್ಟ್​ಮ್ಯಾನ್ ಮಾಡಿದ ಎಕ್ಸ್ ಪೋಸ್ಟ್

ಯಾರು ಇವರು ಪ್ರಫುಲ್ಲಾ ಧರಿವಾಲ?

ಪುಣೆಯವರಾದ ಪ್ರಫುಲ್ಲಾ ಧರಿವಾಲ 2009ರಲ್ಲಿ ನ್ಯಾಷನಲ್ ಟ್ಯಾಲಂಟ್ ಸರ್ಚ್ ಸ್ಕಾಲರ್​ಶಿಪ್ ಯೋಜನೆಯಲ್ಲಿ ಗೆಲುವು ಸಾಧಿಸಿದ್ದರಲ್ಲದೇ ಚೀನಾದಲ್ಲಿ ನಡೆದ ಇಂಟರ್ನ್ಯಾಷನಲ್ ಆಸ್ಟ್ರಾನಮಿ ಒಲಿಂಪಿಯಾಡ್​ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು.

ಅಮೆರಿಕದ ಪ್ರತಿಷ್ಠಿತ ಎಂಐಟಿಯಲ್ಲಿ 2017ರಲ್ಲಿ ಪದವಿ ಪಡೆದಿದ್ದಾರೆ. ಅದಕ್ಕೆ ಮುನ್ನವೇ 2016ರಲ್ಲಿ ಓಪನ್​ಎಐ ಸಂಸ್ಥೆ ಪ್ರಫುಲ್ಲಾರನ್ನು ರಿಸರ್ಚ್ ಇಂಟರ್ನ್ ಆಗಿ ಸೇರಿಸಿಕೊಂಡಿತು. ಹಂತ ಹಂತರವಾಗಿ ಮೇಲೇರಿದ ಪ್ರಫುಲ್ಲಾ ಈಗ ಓಪನ್​ಎಐನ ಕೋರ್ ಟೀಮ್​ನ ಭಾಗವಾಗಿದ್ದಾರೆ. ಜಿಪಿಟಿ 4ಒ ಅಭಿವೃದ್ಧಿಯಲ್ಲಿ ಮಾತ್ರವಲ್ಲದೇ DALL-E 2 ಎಂಬ ಇಮೇಜ್ ಸೃಷ್ಟಿಸುವ ಆಯಪ್ ಇತ್ಯಾದಿ ಕೆಲ ಪ್ರಮುಖ ಸಾಧನಗಳ ಹಿಂದಿನ ಶಕ್ತಿ ಅವರಾಗಿದ್ದಾರೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries