ಬದಿಯಡ್ಕ: ನೀರ್ಚಾಲು ಸಮೀಪದ ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅಖಿಲ ಕೇರಳ ತಂತ್ರಿ ಸಮಾಜ ಉತ್ತರ ವಲಯ ಸಮಿತಿಯ ನೇತೃತ್ವದಲ್ಲಿ ಮೇ 6 ರ ವರೆಗೆ ನಡೆಯುತ್ತಿರುವ 10 ದಿನಗಳ ರಜಾ ಕಾಲದ ಸಂಸ್ಕøತ ಸಂವಾದ ಶಿಬಿರದ ಅಂಗವಾಗಿ ಮೇ 5 ರಂದು ಬೆಳಗ್ಗೆಯಿಂದ ಒಂದು ದಿನದ ಸಂಸ್ಕøತ ಸಂವಾದ ಶಿಬಿರ ಸಾರ್ವಜನಿಕರಿಗೆ ನಡೆಯಲಿರುವುದು. ಈ ಶಿಬಿರದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.
ಕಾಸರಗೋಡಿನಿಂದ ತಿರುವನಂತಪುರದವರೆಗಿನ ಋಗ್ವೇದ, ಯಾಜುರ್, ಸಾಮ ವೇದ ಪದ್ದತಿಯ ಸುಮಾರು 50 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.
ಸಮಾಪನ ದಿನದಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಆಶೀರ್ವದಿಸಲಿದ್ದಾರೆ.