HEALTH TIPS

ಡಿಡಿ ಕಿಸಾನ್ ನಲ್ಲಿ 50 ಭಾಷೆಗಳಲ್ಲಿ ಸುದ್ದಿ ಓದಲಿರುವ ಎಐ ನಿರೂಪಕರು!

                ನವದೆಹಲಿ :ದೂರದರ್ಶನ ಕಿಸಾನ್ ಚಾನೆಲ್ (ಡಿಡಿ ಕಿಸಾನ್) ಶೀಘ್ರದಲ್ಲಿ 50 ಭಾಷೆಗಳಲ್ಲಿ ಮಾತನಾಡಬಲ್ಲ ಇಬ್ಬರು ಕೃತಕ ಬುದ್ದಿ ಮತ್ತೆ (ಎಐ)ಯ ಆಯಂಕರನ್ನು ನಿಯೋಜಿಸಲಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ.

                ಎಐ ಕ್ರಿಶ ಹಾಗೂ ಎಐ ಭೂಮಿ ಎಂಬ ಈ ಎರಡು ಎಐ ನಿರೂಪಕರು ಕಂಪ್ಯೂಟರ್ಗಳಾಗಿದ್ದು, ಇವು ಮನುಷ್ಯರಂತೆಯೇ ಕೆಲಸ ಮಾಡುತ್ತವೆ.

                ಆದರೆ, ಮನುಷ್ಯನಿಗೆ ಭಿನ್ನವಾಗಿ ಯಾವುದೇ ದಣಿವು ಆಯಾಸವಿಲ್ಲದೆ ಇವುಗಳು 365 ದಿನಗಳ ಕಾಲ 24 ಗಂಟೆ ಸುದ್ದಿಯನ್ನು ಓದಬಲ್ಲರು.

               ಇದರೊಂದಿಗೆ ದೂರದರ್ಶನ ಕಿಸಾನ್ ಚಾನೆಲ್ ಕೃತಕ ಬುದ್ಧಿಮತ್ತೆ (ಎಐ)ಯ ನಿರೂಪಕರನ್ನು ಹೊಂದಿರುವ ದೇಶದ ಮೊದಲ ಸರಕಾರಿ ಟಿ.ವಿ. ಚಾನೆಲ್ ಆಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಡಿ.ಡಿ. ಕಿಸಾನ್ ಭಾರತ ಸರಕಾರ ಆರಂಭಿಸಿದ ದೇಶದ ಏಕೈಕ ಟಿ.ವಿ. ಚಾನಲ್ ಆಗಿದೆ. ಈ ಚಾನೆಲ್ ಅನ್ನು 2015 ಮೇ 26ರಂದು ಆರಂಭಿಸಲಾಗಿತ್ತು. ಹೊಸ ಎಐ ನಿರೂಪಕರು ಮೇ 26ರಂದು ಚಾನೆಲ್ ನ ಒಂಬತ್ತನೇ ವಾರ್ಷಿಕೋತ್ಸವದಂದು ಸುದ್ದಿಗಳನ್ನು ಓದಲು ಆರಂಭಿಸಲಿದ್ದಾರೆ.

              ಎಐ ನಿರೂಪಕರು ಕಾಶ್ಮೀರದಿಂದ ತಮಿಳುನಾಡಿನವರೆಗೆ ಮತ್ತು ಗುಜರಾತ್ನಿಂದ ಅರುಣಾಚಲದ ವರೆಗೆ ದೇಶ ಮತ್ತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನೆಗಳು, ಕೃಷಿ ಮಂಡಿಗಳಲ್ಲಿನ ಪ್ರವೃತ್ತಿಗಳು, ಹವಾಮಾನ ಬದಲಾವಣೆಗಳು ಅಥವಾ ಸರಕಾರಿ ಯೋಜನೆಗಳ ಬಗೆಗಿನ ಎಲ್ಲಾ ಮಾಹಿತಿಗಳನ್ನು ರೈತರಿಗೆ ತಲುಪಿಸಲಿದೆ ಎಂದು ಸಚಿವಾಲಯ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries