ಮಾಲೆ (PTI): ಭಾರತ ಸರ್ಕಾರವು 51 ಸೇನಾ ಯೋಧರನ್ನು ವಾಪಸು ಕರೆಯಿಸಿಕೊಂಡಿದೆ ಎಂದು ಮಾಲ್ದೀವ್ಸ್ ಸರ್ಕಾರ ತಿಳಿಸಿದೆ. ಯೋಧರನ್ನು ಮೇ 10ರೊಳಗೆ ವಾಪಸು ಕರೆಯಿಸಿಕೊಳ್ಳಬೇಕು ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ಗಡುವು ನಿಗದಿಪಡಿಸಿದ್ದರು.
ಹಿಂದೆ, ಭಾರತ ಸರ್ಕಾರವು ಎರಡು ತಂಡಗಳಲ್ಲಿ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ ಎಂದು ಮಾಲ್ದೀವ್ಸ್ ಸರ್ಕಾರ ತಿಳಿಸಿತ್ತು.
ಆದರೆ, ನಿರ್ದಿಷ್ಟ ಸಂಖ್ಯೆಯನ್ನು ಹೇಳಿರಲಿಲ್ಲ.
ಅಧ್ಯಕ್ಷರ ಕಚೇರಿಯ ಮುಖ್ಯ ವಕ್ತಾರರಾದ ಹೀನಾ ವಾಲೀದ್ ಅವರು ಈ ಕುರಿತ ಪ್ರಶ್ನೆಗೆ, ಈವರೆಗೂ ಭಾರತವು 51 ಯೋಧರನ್ನು ಕರೆಯಿಸಿಕೊಂಡಿದೆ ಎಂದು ಪ್ರತಿಕ್ರಿಯಿಸಿದರು.
ದೇಶದಲ್ಲಿ ಎಷ್ಟು ಮಂದಿ ಭಾರತೀಯ ಸೇನೆಯ ಯೋಧರು ನೆಲೆಯೂರಿದ್ದಾರೆ ಎಂಬ ವಿವರ ನೀಡಲು ಅವರು ನಿರಾಕರಿಸಿದರು. ಈ ಮಾಹಿತಿಯನ್ನು ನಂತರ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು ಎಂದು 'ಸನ್' ಸುದ್ದಿಸಂಸ್ಥೆ ವರದಿ ಮಾಡಿದೆ.