HEALTH TIPS

ಇಂಡೊನೇಷ್ಯಾದಲ್ಲಿ ಪ್ರವಾಹ: 52 ಸಾವು, 20 ಮಂದಿ ನಾಪತ್ತೆ

          ನಾ ದತಾರ್: ಇಂಡೊನೇಷ್ಯಾದ ಸುಮಾರ್ತಾ ದ್ವೀಪ ಪ್ರದೇಶದಲ್ಲಿ ಕಳೆದ ವಾರಾಂತ್ಯ ಕಂಡುಬಂದ ದಿಢೀರ್ ಪ್ರವಾಹದಿಂದ ತೀವ್ರ ಹಾನಿಯಾಗಿದ್ದು, ಕನಿಷ್ಠ 52 ಮಂದಿ ಮೃತಪಟ್ಟಿದ್ದಾರೆ.

           ಧಾರಾಕಾರ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು, ಹಲವು ನದಿಗಳು ಉಕ್ಕಿ ಹರಿದಿವೆ.

               ಸುಮಾತ್ರಾದ ದಕ್ಷಿಣ ಭಾಗದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ಹಾನಿ ಸಂಭವಿಸಿದೆ.

            ಹಲವು ಮನೆಗಳು ಕೊಚ್ಚಿಹೋಗಿವೆ. ಹಲವು ಕಟ್ಟಡಗಳು ಜಲಾವೃತವಾಗಿವೆ. ಸುಮಾರು 3,300 ಜನರು ಅತಂತ್ರರಾಗಿದ್ದು, ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದರು.

               ಶೋಧ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಸುಮಾರು 52 ಶವ ಪತ್ತೆಹಚ್ಚಿದ್ದಾರೆ. ಅಗಂ, ತನಾಹ್ ದಾತಾರ್ ಜಿಲ್ಲೆಗಳಲ್ಲಿ ಹೆಚಚಿನ ಹಾನಿಯಾಗಿದೆ. 20 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ ಎಂದು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries