ಬ್ರಾಸಿಲಿಯಾ: ಬ್ರೆಜಿಲ್‌ನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಪ್ರವಾಹ ಮತ್ತು ಮಣ್ಣು ಕುಸಿತ ಸೇರಿದಂತೆ ಮಳೆ ಸಂಬಂಧಿತ ಅವಘಡಗಳಲ್ಲಿ 57 ಮಂದಿ ಮೃತಪಟ್ಟಿದ್ದಾರೆ.
ಬ್ರಾಸಿಲಿಯಾ: ಬ್ರೆಜಿಲ್‌ನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಪ್ರವಾಹ ಮತ್ತು ಮಣ್ಣು ಕುಸಿತ ಸೇರಿದಂತೆ ಮಳೆ ಸಂಬಂಧಿತ ಅವಘಡಗಳಲ್ಲಿ 57 ಮಂದಿ ಮೃತಪಟ್ಟಿದ್ದಾರೆ.
ಸಾವಿರಾರು ಮಂದಿ ಮನೆಗಳನ್ನು ತೊರೆದಿದ್ದು, ಕುಸಿದ ರಸ್ತೆ, ಸೇತುವೆ, ಮನೆಗಳ ಅವಶೇಷಗಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಜಲಾಶಯಗಳಲ್ಲಿ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಯೊ ಗ್ರ್ಯಾಂಡೆ ಡೊ ಸುಲ್ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಗವರ್ನರ್ ಎಡ್ವರ್ಡೊ ಲೀಟೆ ಆದೇಶಿಸಿದ್ದಾರೆ.
'ಇತಿಹಾಸದಲ್ಲೇ ಅತ್ಯಂತ ಕೆಟ್ಟ ಪ್ರಾಕೃತಿಕ ವಿಕೋಪವನ್ನು ನಾವು ಎದುರಿಸುತ್ತಿದ್ದೇವೆ' ಎಂದು ಲೀಟೆ ಹೇಳಿದ್ದಾರೆ.
ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆ ಸಂಪೂರ್ಣ ನೆರವು ನೀಡುವುದಾಗಿ ಘೋಷಿಸಿರುವ ಅಧ್ಯಕ್ಷ ಲೂಸ್ ಇನ್ಯಾಸಿಯೊ, ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಲ್ಲಿ ರಕ್ಷಣಾ ತಂಡ ಮತ್ತು ಅಗತ್ಯ ವಸ್ತುಗಳ ಯಾವುದೇ ಕೊರತೆ ಇಲ್ಲ ಎಂದಿದ್ದಾರೆ.
ಗುವಾಬ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮತ್ತಷ್ಟು ಆತಂಕ ಶುರುವಾಗಿದೆ. ನದಿ ಸಮೀಪದ ಅತ್ಯಂತ ಅಪಾಯದ ಪ್ರದೇಶಗಳಿಂದ ಜನರ ಸ್ಥಳಾಂತರ ಕಾರ್ಯ ನಡೆಯುತ್ತಿದೆ.