ನವದೆಹಲಿ: ಮೂರನೇ ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಶೇ.65. 68 ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಮೇ 7 ರಂದು 11 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ 93 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಚುನಾವಣೆ ಮುಗಿದ 4 ದಿನಗಳ ಬಳಿಕ ಆಯೋಗ ಒಟ್ಟು ಶೇಕಡಾವಾರು ಮತದಾನದ ಪ್ರಮಾಣವನ್ನು ಹಂಚಿಕೊಂಡಿದೆ. ಮೂರನೇ ಹಂತದ ಮತದಾನದಲ್ಲಿ ಶೇ. 66. 89 ರಷ್ಟು ಪುರುಷರು, ಶೇ. 64.41 ರಷ್ಟು ಮಹಿಳೆಯರು, ಶೇ. 25. 2 ರಷ್ಟು ತೃತೀಯ ಲಿಂಗಿಗಳು ಮತದಾನ ಮಾಡಿರುವುದಾಗಿ ಹೇಳಿದೆ.