ಬೀಜಿಂಗ್: ಭೂಮಿಗೆ ಗೋಚರವಾಗದ, ಚಂದ್ರನ ಮತ್ತೊಂದು ಪಾರ್ಶ್ವದಿಂದ ಮಾದರಿಗಳನ್ನು ಸಂಗ್ರಹಿಸಿ ತರುವ ಉದ್ದೇಶದ 'ಚಾಂಗಿ-6' ಗಗನನೌಕೆಯನ್ನು ಚೀನಾ ಶುಕ್ರವಾರ ಉಡ್ಡಯನ ಮಾಡಿದೆ.
ಬೀಜಿಂಗ್: ಭೂಮಿಗೆ ಗೋಚರವಾಗದ, ಚಂದ್ರನ ಮತ್ತೊಂದು ಪಾರ್ಶ್ವದಿಂದ ಮಾದರಿಗಳನ್ನು ಸಂಗ್ರಹಿಸಿ ತರುವ ಉದ್ದೇಶದ 'ಚಾಂಗಿ-6' ಗಗನನೌಕೆಯನ್ನು ಚೀನಾ ಶುಕ್ರವಾರ ಉಡ್ಡಯನ ಮಾಡಿದೆ.
ಚೀನಾದ ದಕ್ಷಿಣದಲ್ಲಿನ ಹೈನಾನ್ ಪ್ರಾಂತ್ಯದ ಕರಾವಳಿಯಲ್ಲಿರುವ ವೆಂಚಾಂಗ್ ಅಂತರಿಕ್ಷ ಉಡ್ಡಯನ ಕೇಂದ್ರದಿಂದ ಗಗನನೌಕೆಯನ್ನು ಹೊತ್ತ 'ಮಾರ್ಚ್-5 ವೈ8' ರಾಕೆಟ್ ನಭಕ್ಕೆ ಚಿಮ್ಮಿತು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ತಿಳಿಸಿದೆ.
ಭೂಮಿಗೆ ಕಾಣದಂತಹ ಚಂದಿರನ ಮತ್ತೊಂದು ಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ, ತರುವ ಇಂತಹ ಬಾಹ್ಯಾಕಾಶ ಕಾರ್ಯಕ್ರಮ ಚಂದ್ರನ ಅನ್ವೇಷಣೆಯಲ್ಲಿಯೇ ಇದೇ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಸಿಎನ್‌ಎಸ್‌ಎ ಹೇಳಿದೆ.
'ಚಾಂಗಿ-6' ಗಗನನೌಕೆಯು, ಆರ್ಬಿಟರ್, ಲ್ಯಾಂಡರ್, ಅಸೆಂಡರ್ ಹಾಗೂ ಭೂಮಿ ಮರಳಲಿರುವ ಘಟಕ ಎಂಬ ನಾಲ್ಕು ಉಪಕರಣಗಳನ್ನು ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚಂದಿರನ ಮತ್ತೊಂದು ಬದಿಯಲ್ಲಿನ ಶಿಲೆಗಳು, ದೂಳಿನ ಕಣಗಳನ್ನು ಸಂಗ್ರಹಿಸಲಾಗುವುದು. ಈ ಮಾದರಿಗಳನ್ನು 'ಅಸೆಂಡರ್', ಭೂಮಿಗೆ ತರಲಿದ್ದು, ನಂತರ ಅವುಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಸಿಎನ್‌ಎಸ್‌ಎ ತಿಳಿಸಿದೆ.