ಪಣಜಿ: ಗೋವಾದ ಮನೋಹರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ(ಎಂಐಎ) ರನ್‌ವೇ ಎಡ್ಜ್ ಲೈಟ್‌ಗಳಿಗೆ ಸಿಡಿಲು ಬಡಿದು ಹಾನಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಇಳಿಯಬೇಕಿದ್ದ 6 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಣಜಿ: ಗೋವಾದ ಮನೋಹರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ(ಎಂಐಎ) ರನ್‌ವೇ ಎಡ್ಜ್ ಲೈಟ್‌ಗಳಿಗೆ ಸಿಡಿಲು ಬಡಿದು ಹಾನಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಇಳಿಯಬೇಕಿದ್ದ 6 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಗೋವಾದ ಮೊಪಾದಲ್ಲಿರುವ ವಿಮಾನ ನಿಲ್ದಾಣಕ್ಕೆ ಬುಧವಾರ ಸಂಜೆ 5.15ರ ಸುಮಾರಿಗೆ ಸಿಡಿಲು ಬಡಿದಿದೆ ಎಂದು ಎಂಐಎ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ರನ್‌ವೇ ಹಾನಿಯಾಗಿರುವ ಬಗ್ಗೆ ರಾತ್ರಿ 8 ಗಂಟೆ ಸುಮಾರಿಗೆ ಗಮನಕ್ಕೆ ಬಂದಿತು. 6 ವಿಮಾನಗಳ ಮಾರ್ಗ ಬದಲಿಸಲಾಗಿದ್ದು, ಬಳಿಕ, ಸಮಸ್ಯೆ ಬಗೆಹರಿಸಿ ವಿಮಾನನಿಲ್ದಾಣದ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಗಿದೆ' ಎಂದು ಪ್ರಕಟಣೆ ತಿಳಿಸಿದೆ.
'ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗಿರುವ ಕುರಿತಂತೆ ವಿಷಾದಿಸುತ್ತೇವೆ. ಈ ರೀತಿಯ ಪ್ರಾಕೃತಿಕ ವಿಕೋಪದ ಮನುಷ್ಯರ ಕೈ ಮೀರಿದ್ದಾಗಿದೆ' ಎಂದು ಅದು ಹೇಳಿದೆ.
ಎಂಐಎ ಜೊತೆಗೆ ದಕ್ಷಿಣ ಗೋವಾದಲ್ಲಿ ದಬೊಲಿಮ್‌ನಲ್ಲಿ ಮತ್ತೊಂದು ವಿಮಾನ ನಿಲ್ದಾಣ ಇದೆ.