ಸಿಲ್ಹೆಟ್: ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಟ್ವೆಂಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಗುರುವಾರ ಪ್ರವಾಸಿ ಭಾರತೀಯ ತಂಡವು 7 ವಿಕೆಟ್‍ಗಳ ಜಯ ಗಳಿಸಿದೆ.
ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದ ಅಭೇದ್ಯ ಮುನ್ನಡೆ ಗಳಿಸಿದೆ.
ಪಂದ್ಯವನ್ನು ಗೆಲ್ಲಲು 118 ರನ್‍ಗಳ ಗುರಿಯನ್ನು ಪಡೆದ ಭಾರತೀಯ ಮಹಿಳೆಯರು ಇನ್ನೂ 9 ಎಸೆತಗಳು ಬಾಕಿಯಿರುವಂತೆಯೇ ಗುರಿ ತಲುಪಿದರು. ಭಾರತವು 18.3 ಓವರ್‍ಗಳಲ್ಲಿ ಕೇವಲ 3 ವಿಕೆಟ್‍ಗಳನ್ನು ಕಳೆದುಕೊಂಡು 121 ರನ್ ಗಳಿಸಿತು.
ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಇಳಿಸಿದರು. ಭಾರತೀಯ ಬೌಲರ್‍ಗಳು ಇನ್ನೊಂದು ಭವ್ಯ ಪ್ರದರ್ಶನ ನೀಡಿ ಬಾಂಗ್ಲಾದೇಶದ ಇನಿಂಗ್ಸನ್ನು ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ 117ಕ್ಕೆ ನಿಯಂತ್ರಿಸಿದರು.
ಭಾರತದ ಪರವಾಗಿ ಆರಂಭಿಕರಾದ ಸ್ಮøತಿ ಮಂದಾನ ಮತ್ತು ಶಫಾಲಿ ವರ್ಮ 12.1 ಓವರ್‍ಗಳಲ್ಲಿ 91 ರನ್‍ಗಳನ್ನು ಕಲೆ ಹಾಕಿದರು ಹಾಗೂ ಆ ಮೂಲಕ ಭಾರತವನ್ನು ವಿಜಯದ ಸನಿಹಕ್ಕೆ ತಂದರು.
ಶಫಾಲಿ 38 ಎಸೆತಗಳಲ್ಲಿ 51 ರನ್ ಗಳಿಸಿ ನಿರ್ಗಮಿಸಿದರು. ಅವರ ಇನಿಂಗ್ಸ್‍ನಲ್ಲಿ 8 ಬೌಂಡರಿಗಳಿದ್ದವು. ಅದೇ ವೇಳೆ, ಮಂದಾನ 42 ಎಸೆತಗಳಲ್ಲಿ 47 ರನ್‍ಗಳನ್ನು ಮಾಡಿದರು. ಅದರಲ್ಲಿ 5 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇದ್ದವು.
ಅವರಿಬ್ಬರೂ ಅಲ್ಪ ಅಂತರದಲ್ಲಿ ನಿರ್ಗಮಿಸಿದರೂ, ಅಷ್ಟರಲ್ಲಾಗಲೇ ಭಾರತವವನ್ನು ವಿಜಯದ ಸನಿಹಕ್ಕೆ ಒಯ್ದಿದ್ದರು. ಬಳಿಕ ಬಂದ ಬ್ಯಾಟರ್‍ಗಳು ವಿಜಯದ ವಿಧಿವಿಧಾನಗಳನ್ನು ಪೂರೈಸಿದರು.
ಇದಕ್ಕೂ ಮೊದಲು, ಮೊದಲು ಫೀಲ್ಡಿಂಗ್ ಮಾಡುವ ಭಾರತದ ನಿರ್ಧಾರವು ತಕ್ಷಣಕ್ಕೆ ಅಪೇಕ್ಷಿತ ಫಲಿತಾಂಶವನ್ನು ನೀಡಲಿಲ್ಲ. ಆರು ಪವರ್‍ಪ್ಲೇ ಓವರ್‍ಗಳಲ್ಲಿ ಬಾಂಗ್ಲಾದೇಶವು ವಿಕೆಟ್ ನಷ್ಟವಿಲ್ಲದೆ 44 ರನ್‍ಗಳನ್ನು ಗಳಿಸಿತ್ತು.
ಆದರೆ ಬಳಿಕ, ಭಾರತೀಯ ಬೌಲರ್‍ಗಳು ತಮ್ಮ ಎಸೆತಗಳನ್ನು ಮೊನಚುಗೊಳಿಸಿದರು. ಅದಕ್ಕೂ ಮೊದಲು, ದಿಲಾರಾ ಅಖ್ತರ್ 25 ಎಸೆತಗಳಲ್ಲಿ 39 ರನ್‍ಗಳನ್ನು ಸಿಡಿಸಿದ್ದರು.
ದಿಲಾರಾ ಐದು ಬೌಂಡರಿಗಳನ್ನು ಸಿಡಿಸಿದರು. ಅವರು ಭಾರತೀಯ ಬೌಲರ್‍ಗಳನ್ನು ಹೆಚ್ಚಿನ ಶ್ರಮವಿಲ್ಲದೆ ನಿಭಾಯಿಸಿದರು.
ಸರಣಿಯಲ್ಲಿ 0-2ರಿಂದ ಹಿನ್ನಡೆಯಲ್ಲಿದ್ದ ಬಾಂಗ್ಲಾದೇಶವು ಮೂರನೇ ಪಂದ್ಯವನ್ನು ಗೆಲ್ಲಲೇಬೇಕೆಂದು ಇರಾದೆಯಿಂದ ಆಡಿದಂತೆ ಕಂಡುಬಂತು. ಆ ಮೂಲಕ ಸರಣಿಯನ್ನು ಜಿವಂತವಾಗಿರಿಸುವುದು ಆತಿಥೇಯ ತಂಡದ ಗುರಿಯಾಗಿತ್ತು.
ದಿಲಾರಾ ತಂಡದ ರನ್ ಗಳಿಕೆಯನ್ನು ಏರಿಸುತ್ತಿರುವಂತೆಯೇ, ಬಾಂಗ್ಲಾದೇಶವು ಮುರ್ಷಿದಾ ಖಾತುನ್ (9)ರ ರೂಪದಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು.
ಬಳಿಕ, ಈ ಸರಣಿಯ ಆರಂಭಿಕ ಪಂದ್ಯದಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿರುವ ಮಧ್ಯಮ ವೇಗಿ ರೇಣುಕಾ ಸಿಂಗ್ ತನ್ನ ನಿಧಾನ ಎಸೆತದ ಮೂಲಕ ದಿಲಾರರ ವಿಕೆಟ್ ಉರುಳಿಸಿದರು.
10ನೇ ಓವರ್‍ನ ಕೊನೆಯಲ್ಲಿ, ಬಾಂಗ್ಲಾದೇಶವು 2 ವಿಕೆಟ್‍ಗಳ ನಷ್ಟಕ್ಕೆ 66 ರನ್ ಗಳಿಸಿತ್ತು.
ನಾಯಕಿ ನಿಗರ್ ಸುಲ್ತಾನ 28 ರನ್‍ಗಳನ್ನು ಗಳಿಸಿದರೆ, ಶೋಭನಾ ಮೋಸ್ಟರಿ 15 ರನ್‍ಗಳ ದೇಣಿಗೆ ನೀಡಿದರು.
ರಾಧಾ ಯಾದವ್ 22 ರನ್‍ಗಳನ್ನು ನೀಡಿ 2 ವಿಕೆಟ್‍ಗಳನ್ನು ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ (20 ಓವರ್‍ಗಳಲ್ಲಿ) 117-8
ದಿಲಾರಾ ಅಖ್ತರ್ 39, ಮುರ್ಷಿದಾ ಖಾತುನ್ 9, ನಿಗರ್ ಸುಲ್ತಾನಾ 28, ಶೋಭನಾ ಮೋಸ್ಟರಿ 15, ರಿತು ಮೋನಿ 8
ರಾಧಾ ಯಾದವ್ 2-22
ಭಾರತ (18.3 ಓವರ್‍ಗಳಲ್ಲಿ) 121-3
ಸ್ಮøತಿ ಮಂದಾನ 47, ಶಫಾಲಿ ವರ್ಮ 51, ಡಯಲಾನ್ ಹೇಮಲತ 9, ಹರ್ಮನ್‍ಪ್ರೀತ್ ಕೌರ್ (ಅಜೇಯ) 6, ರಿಚಾ ಘೋಷ್ (ಅಜೇಯ) 8
ನಹೀದಾ ಅಖ್ತರ್ 1-24, ರಬಿಯಾ ಖಾನ್ 1-24, ರಿತು ಮೋನಿ 1-10