ಕಾಸರಗೋಡು: ಹೈಯರ್ ಸೆಕೆಂಡರಿ ವಿಭಾಗದ ಎರಡನೇ ವರ್ಷದ ಪರೀಕ್ಷೆಗೆ ಹಾಜರಾದ 15523 ವಿದ್ಯಾರ್ಥಿಗಳಲ್ಲಿ 11374 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಇವರಲ್ಲಿ 1192 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. ಜಿಲ್ಲೆಯ 105 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಜಿಲ್ಲೆಯ ಮುಕ್ತ ಶಾಲಾ ವಿಭಾಗದಲ್ಲಿ 1992 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 1912 ವಿದ್ಯಾರ್ಥಿಗಳು ಹಾಜರಾಗಿದ್ದು, 737 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಮುಕ್ತ ಶಾಲಾ ವಿಭಾಗದಲ್ಲಿ ಶೇ.38 ಫಲಿತಾಂಶ ದಾಖಲಾಗಿದೆ. ನಾಲ್ವರು ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಪಡೆದಿದ್ದಾರೆ.
ಜಿಲ್ಲೆಯಲ್ಲಿ ವೊಕೇಶನಲ್ ಹೈಯರ್ ಸೆಕೆಂಡರಿ(ವಿಎಚ್‍ಎಸ್‍ಇ)ವಿಭಾಗದಲ್ಲಿ ಶೇಕಡಾ 61.31 ಫಲಿತಾಂಶ ದಾಖಲಾಗಿದೆ. ರಾಜ್ಯದಲ್ಲಿ ಕಾಸರಗೋಡು ಜಿಲ್ಲೆ ಅತಿ ಕಡಿಮೆ ಉತ್ತೀರ್ಣರಾದ ಸಂಖ್ಯೆ ಇದಾಗಿದೆ. ಜಿಲ್ಲೆಯಲ್ಲಿ 1225 ವಿದ್ಯಾರ್ಥಿಗಳು ವಿಎಚ್‍ಎಸ್‍ಇ ಪರೀಕ್ಷೆಗೆ ಹಾಜರಾಗಿದ್ದರು.
ರಾಜ್ಯದಲ್ಲಿ 78.69ಶೇ. ಫಲಿತಾಂಶ:
ಕೇರಳ ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ 78.69ಶೇ. ಫಲಿತಾಂಶ ದಾಖಲಾಗಿದೆ. ರೆಗ್ಯುಲರ್ ವಿಭಾಗದಲ್ಲಿ ಪರೀಕ್ಷೆ ಎದುರಿಸಿದ 374755 ಮಂದಿ ವಿದ್ಯಾರ್ಥಿಗಳಲ್ಲಿ 294888ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಕಳೆದ ವರ್ಷಕ್ಕಿಂತ ಈ ಬಾರಿ ಉತ್ತೀರ್ಣರಾದವರ ಶೇಕಡಾವಾರು ಕುಸಿದಿದೆ. ಕಳೆದ ವರ್ಷ ಶೇ.82.95ಮಂದಿ ಉತ್ತೀರ್ಣರಾಗಿದ್ದು, ಶೇ. 4.26ರಷ್ಟು ಕುಸಿತ ಉಂಟಾಗಿದೆ. ರಾಜ್ಯದಲ್ಲಿ ಏಳು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಶೇ. ನೂರು ಫಲಿತಾಂಶ ದಾಖಲಾಗಿದೆ. ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ ವಿಭಾಗದಲ್ಲಿ ಪರೀಕ್ಷೆ ಬರೆದ 27586ಮಂದಿ ವಿದ್ಯಾರ್ಥಿಗಳಲ್ಲಿ 19702ಮಂದಿ ಉನ್ನತ ಶೀಕ್ಷಣಕ್ಕೆ ಅರ್ಹತೆ ಪಡೆಯುವ ಮೂಲಕ ಶೇ.71.42ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಈ ಫಲಿತಾಂಶ ಶೇ. 78.39ಆಗಿತ್ತು. ಈ ಬಾರಿ ಶೇ. 6.97ರಷ್ಟು ಕಡಿಮೆ ಫಲಿತಾಂಶ ದಾಖಲಾಗಿದೆ.