ತಿರುವನಂತಪುರ: ಹೈಯರ್ ಸೆಕೆಂಡರಿ ಪರೀಕ್ಷೆ ಫಲಿತಾಂಶವನ್ನು ನಿನ್ನೆ ಅಪರಾಹ್ನ ಪ್ರಕಟಿಸಲಾಗಿದೆ. ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಅವರು ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ.
ಈ ವರ್ಷ ಶೇ 78.69ರಷ್ಟು ಉತ್ತೀರ್ಣರಾಗಿದ್ದಾರೆ. 2,94,878 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹರಾಗಿದ್ದಾರೆ. ಕಳೆದ ವರ್ಷಕ್ಕಿಂತ ಶೇ.4.26ರಷ್ಟು ಉತ್ತೀರ್ಣತೆ ಕಡಮೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 16 ದಿನ ಮುಂಚಿತವಾಗಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಉತ್ತೀರ್ಣರ ಪ್ರಮಾಣವು ಎರ್ನಾಕುಳಂನಲ್ಲಿ ಅತ್ಯಧಿಕ ಮತ್ತು ವಯನಾಡಿನಲ್ಲಿ ಕಡಮೆಯಾಗಿದೆ. 63 ಶಾಲೆಗಳು 100 ಶೇ. ಅಂಕ ಗಳಿಸಿವೆ. ಎಲ್ಲಾ ವಿಷಯಗಳಲ್ಲಿ ಎ+ ಪಡೆದವರ ಸಂಖ್ಯೆಯೂ ಹೆಚ್ಚಳಗೊಂಡಿದೆ.
39,242 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. ಪ್ಲಸ್ ಟು ವಿಜ್ಞಾನದಲ್ಲಿ ಶೇ.84.84, ವಾಣಿಜ್ಯ ವಿಭಾಗದಲ್ಲಿ ಶೇ.76.11 ಮತ್ತು ಮಾನವಿಕ ವಿಭಾಗದಲ್ಲಿ ಶೇ.67.09 ಉತ್ತೀರ್ಣರಾಗಿದ್ದಾರೆ.
ಈ ವರ್ಷ 4,41,120 ವಿದ್ಯಾರ್ಥಿಗಳು ಪ್ಲಸ್ ಟು ಪರೀಕ್ಷೆಗೆ ಹಾಜರಾಗಿದ್ದರು. ವೊಕೇಶನಲ್ ಹೈಯರ್ ಸೆಕೆಂಡರಿ ರೆಗ್ಯುಲರ್ ವಿಭಾಗದಲ್ಲಿ 27,798 ಹಾಗೂ ಖಾಸಗಿ ವಿಭಾಗದಲ್ಲಿ 1,502 ಸೇರಿದಂತೆ ಒಟ್ಟು 29,300 ಮಂದಿ ಪ್ಲಸ್ ಟು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.
www.prd.kerala.gov.in, www.keralaresults.nic.in, www.result.kerala.gov.in, www. ಫಲಿತಾಂಶವು ವೆಬ್‌ಸೈಟ್‌ಗಳಲ್ಲಿ examresults.kerala.gov.in ಮತ್ತು www.results.kite.kerala.gov.in ನಲ್ಲಿ ಲಭ್ಯವಿರುತ್ತದೆ.