HEALTH TIPS

ತೈವಾನ್‌ ಸುತ್ತ ಚೀನಾದ 7 ಮಿಲಿಟರಿ ವಿಮಾನಗಳ ಕಾರ್ಯಾಚರಣೆ

           ತೈಪೆ : ಚೀನಾದ ಏಳು ಮಿಲಿಟರಿ ವಿಮಾನಗಳು ಮತ್ತು ಐದು ಯುದ್ಧನೌಕೆಗಳು ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ಗಂಟೆವರೆಗೆ ತೈವಾನ್‌ ಸುತ್ತ ಕಾರ್ಯಾಚರಣೆ ನಡೆಸಿರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ (ಎಂಎನ್‌ಡಿ) ಪತ್ತೆ ಮಾಡಿದೆ.


             ತೈವಾನ್‌ನ ಎಂಎನ್‌ಡಿ ಪ್ರಕಾರ, ಏಳು ಮಿಲಿಟರಿ ವಿಮಾನಗಳ ಪೈಕಿ ಒಂದು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ ತೈವಾನ್‌ನ ನೈರುತ್ಯ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದೆ.

             ಚೀನಾದ ಆಕ್ರಮಣಕಾರಿ ವರ್ತನೆಯನ್ನು ತೈವಾನ್‌ನ ಸಶಸ್ತ್ರ ಪಡೆಗಳು ಮೇಲ್ವಿಚಾರಣೆ ನಡೆಸಿವೆ. ಬಳಿಕ,ಯುದ್ಧ ಗಸ್ತು ವಿಮಾನಗಳು, ಹಡಗುಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ ಎಂದು ತೈವಾನ್‌ ಹೇಳಿದೆ.

                ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ 6 ಗಂಟೆಯವರೆಗೂ ಚೀನಾದ 9 ವಿಮಾನಗಳು ಮತ್ತು ಐದು ಹಡಗುಗಳು ತೈವಾನ್ ಸುತ್ತ ಕಾರ್ಯಾಚರಣೆಯಲ್ಲಿ ತೊಡಗಿದದ್ದೂ ಕಂಡುಬಂದಿತ್ತು.

ಮೇ ತಿಂಗಳಿನಲ್ಲಿ ಈವರೆಗೆ, ಚೀನಾದ ಮಿಲಿಟರಿ ವಿಮಾನಗಳು 39 ಬಾರಿ ಮತ್ತು ಯುದ್ಧನೌಕೆಗಳು 21 ಬಾರಿ ತೈವಾನ್ ಸುತ್ತ ಕಾರ್ಯಾಚರಣೆ ನಡೆಸಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries