ಕುಂಬಳೆ : ಸರೋವರ ದೇವಾಲಯ, ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನ ಮಹೋತ್ಸವ ಮೇ 7ರಂದು ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿರುವುದು.
ಬೆಳಗ್ಗೆ 8ಕ್ಕೆ ಗಣಹೋಮ, 9ರಿಂದ ವೇದಪಾರಾಯಣ, 10ರಿಂದ ಶ್ರೀದೇವರಿಗೆ ಪಂಚವಿಂಶತಿ ಕಲಶಾಭಿಷೇP, ಭಜನೆ ನಡೆಯುವುದು. 2008ರ ಏ. 30ರಿಂದ ಮೇ 8ರ ವರೆಗೆ ಅನಂತಪುರದಲ್ಲಿ ಅಪೂರ್ವ ಕಡುಶರ್ಕರ ವಿಗ್ರಹಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನೆರವೇರಿತ್ತು.