ಕೊಚ್ಚಿ: ಮಾಜಿ ಸಹಾಯಕ ವ್ಯವಸ್ಥಾಪಕ 7 ಕೋಟಿ ವಂಚನೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಕಡವಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2023ರ ಜನವರಿ, ನವೆಂಬರ್,ರಲ್ಲಿ, ಮಾಜಿ ಸಹಾಯಕ. ವ್ಯವಸ್ಥಾಪಕ ಸತೀಶ್ ಚಂದ್ರನ್ ವಂಚಿಸಿದ್ದಾರೆ. ಮುಂಬೈನ ಜೀವಾ ಲೈಫ್ ಸ್ಟೈಲ್ ಪ್ರೈ. (ಲಿ)ಎಸ್.ಎಸ್.. ಎಂಪೈರ್ ಮತ್ತು ರಾಜಸ್ಥಾನದ ಪಟ್ಟೋಡಿಯಾ ಬ್ರದರ್ಸ್ ನೊಂದಿಗೆ ಮಾಜಿ ಸಹಾಯಕ. ಮ್ಯಾನೇಜರ್ ಸತೀಶ್ ಚಂದ್ರನ್ ಒಪ್ಪಂದ ಮಾಡಿಕೊಂಡಿದ್ದರು. 7 ಕೋಟಿಯ ಗುತ್ತಿಗೆಯಲ್ಲಿ 3 ಕೋಟಿ ಕೊಟ್ಟು ಜೋಳ ಖರೀದಿಸಿ ಮಾರಾಟ ಮಾಡಿದ್ದಾರೆ. ಉಳಿದ ನಾಲ್ಕು ಕೋಟಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಕಂಪನಿಗಳು ಸಪ್ಲೈಕೋ ಸಂಸ್ಥೆಯನ್ನು ಸಂಪರ್ಕಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಸಪ್ಲೈಕೋನ ತಪಾಸಣೆಯ ಸಂದರ್ಭದಲ್ಲೂ ಅಕ್ರಮಗಳು ವರದಿಯಾಗಿವೆ. ಸಪ್ಲೈಕೋನ ಎರಡು ಮೇಲ್ ಐಡಿಗಳ ಮೂಲಕ ನಕಲಿ ಖರೀದಿ ಆದೇಶವನ್ನು ಕಳುಹಿಸಲಾಗಿದೆ.
ಜಿ.ಎಸ್.ಟಿ ಸಂಖ್ಯೆಯ ದುರ್ಬಳಕೆಯಿಂದಾಗಿ, ಜಿ.ಎಸ್.ಟಿ. ಬಿಲ್ ಸಪ್ಲೈಕೋನ ಜಿಎಸ್ ಟಿ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಸಪ್ಲೈಕೋ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಕಡವಂತ್ರ ಪೋಲೀಸರು ಸತೀಶ್ ಕುಮಾರ್ ವಿರುದ್ಧ ಪೋರ್ಜರಿ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗೆ ಸಪ್ಲೈಕೋ ನೌಕರರ ಸಹಾಯವೂ ಸಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಂದಿಯನ್ನು ಪೆÇಲೀಸರು ವಿಚಾರಣೆ ನಡೆಸಲಿದ್ದಾರೆ.